ಹೀಲಿಯಂ ಅನಿಲವನ್ನು ಸೇವಿಸಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಬಾರಾಖಂಬಾ ಪ್ರದೇಶದಲ್ಲಿ ನಡೆದಿದೆ.
ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಯುವಕ ತನ್ನ ಜೀವನವನ್ನು ಕೊನೆಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಧೀರಜ್ ಕನ್ಸಾಲ್ ಎಂದು ಗುರುತಿಸಲ್ಪಟ್ಟ ಈ ವ್ಯಕ್ತಿ ಗುರುಗ್ರಾಮ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು . ಇಂಡಿಯಾಮಾರ್ಟ್ನಲ್ಲಿ ಹುಡುಕಿ ಗಾಜಿಯಾಬಾದ್ನ ಪೂರೈಕೆದಾರರಿಂದ ಅನಿಲವನ್ನು ಪಡೆದಿದ್ದನು.
ಸಾಯುವ ಮುನ್ನ ಧೀರಜ್ ಫೇಸ್ಬುಕ್ನಲ್ಲಿ ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾನೆ: “ಸಾವು ನನಗೆ ಜೀವನದ ಅತ್ಯಂತ ಸುಂದರವಾದ ಭಾಗ. ದಯವಿಟ್ಟು ನನ್ನ ಸಾವಿನ ಬಗ್ಗೆ ದುಃಖಿಸಬೇಡಿ. ಆತ್ಮಹತ್ಯೆ ತಪ್ಪಲ್ಲ ಏಕೆಂದರೆ ನನ್ನ ಮೇಲೆ ನನಗೆ ಯಾವುದೇ ಜವಾಬ್ದಾರಿಗಳಿಲ್ಲ ಎಂದು ಬರೆದುಕೊಂಡಿದ್ದಾರೆ.