ಮಾವಿನ ಹಣ್ಣಿನ ಬಣ್ಣ ನೋಡಿ ಮರುಳಾಗದಿರಿ….! ಗಮನದಲ್ಲಿಟ್ಟುಕೊಳ್ಳಿ ಈ ವಿಷಯ

ಮಳೆಗಾಲ ಶುರುವಾಗ್ತಾ ಇದೆ. ಮಾರುಕಟ್ಟೆಗೆ ಬರುವ ಮಾವಿನ ಹಣ್ಣಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾವು ಪ್ರಿಯರು ಋತುವಿನ ಹಣ್ಣಿನ ಸವಿ ಸವಿಯುತ್ತಿದ್ದಾರೆ. ಆದ್ರೆ ಮಾವಿನ ಹಣ್ಣು ಖರೀದಿ ಮಾಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

ಮಾರುಕಟ್ಟೆಯಲ್ಲಿ ಹಳದಿ ಬಣ್ಣದ ಆಕರ್ಷಕ ಮಾವನ್ನು ನಾವು ಕಾಣ್ತೇವೆ. ಹಣ್ಣಿನ ಬಣ್ಣ ನೋಡಿ ಮರುಳಾಗಿ ಕೆ.ಜಿ. ಗಟ್ಟಲೆ ಮಾವನ್ನು ಹೊತ್ತು ತರುತ್ತೇವೆ. ಆದ್ರೆ ಈ ಮಾವಿನ ಹಣ್ಣು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಮಾವಿನ ಕಾಯಿ ಬೇಗ ಹಣ್ಣಾಗ್ಲಿ ಎನ್ನುವ ಕಾರಣಕ್ಕೆ ಇತ್ತೀಚಿಗೆ  ಕ್ಯಾಲ್ಸಿಯಂ ಕಾರ್ಬೈಡ್ ಬಳಸಲಾಗ್ತಿದೆ.

ಕಾರ್ಬೈಡ್ ಬಳಕೆಯಿಂದ ಮಾವಿನ ಬಣ್ಣ ಬದಲಾಗುತ್ತದೆ. ಕಾರ್ಬೈಡ್ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕ್ಯಾನ್ಸರ್ ನಂತ ಅಪಾಯಕಾರಿ ರೋಗಗಳಿಗೆ ಇದು ಕಾರಣವಾಗುತ್ತದೆ.

ಮಾರುಕಟ್ಟೆಯಿಂದ ತಂದ ಮಾವಿನ ಹಣ್ಣನ್ನು ಸ್ವಚ್ಛಗೊಳಿಸಿ ಬಳಸಿ.

ಹಳದಿ ಬಣ್ಣದಲ್ಲಿ ಹೊಳೆಯುತ್ತಿರುವ ಮಾವಿನ ಹಣ್ಣನ್ನು ಎಂದೂ ಖರೀದಿ ಮಾಡಬೇಡಿ.

ಕಾರ್ಬೈಡ್ ಬಳಸದೆ ನೈಸರ್ಗಿಕವಾದ ಹಣ್ಣು ಮಾರಾಟ ಮಾಡುವ ಸ್ಟೋರ್ ಗಳಲ್ಲಿ ಮಾವಿನ ಹಣ್ಣನ್ನು ಖರೀದಿ ಮಾಡಿ.

ಋತುವಿಗಿಂತ ಮೊದಲು ಮಾರುಕಟ್ಟೆಗೆ ಬರುವ ಮಾವಿನ ಹಣ್ಣನ್ನು ಎಂದೂ ಖರೀದಿ ಮಾಡಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read