HomeInternationalಅಮೆರಿಕ ಬೆನ್ನಿಗೆ ಇಸ್ರೇಲ್ ಚೂರಿ? ಇಲ್ಲಿದೆ ಭೀಕರ ಆರೋಪದ ವಿವರ… Donald Trump

ಅಮೆರಿಕ ಬೆನ್ನಿಗೆ ಇಸ್ರೇಲ್ ಚೂರಿ? ಇಲ್ಲಿದೆ ಭೀಕರ ಆರೋಪದ ವಿವರ… Donald Trump

ಅಮೆರಿಕ ಅಂದ್ರೆ ಬೇರೆ ಅಲ್ಲ, ಇಸ್ರೇಲ್ ಬಿಟ್ಟು ಅಮೆರಿಕ ಬದುಕಿರೋದೇ ಇಲ್ಲ… ಇಂತಹ ಮಾತುಗಳನ್ನ ನಾವು & ನೀವು ಸುಮಾರು 75 ವರ್ಷಗಳಿಂದ ಅಂದ್ರೆ ಮುಕ್ಕಾಲು ಶತಮಾನದಿಂದ ಕೂಡ ಕೇಳಿಕೊಂಡೇ ಬಂದಿದ್ದೇವೆ. ಅದರಲ್ಲೂ ಹಿಟ್ಲರ್ ಎಂಬ ರಾಕ್ಷಸನ ಅಂತ್ಯದ ನಂತರ ಇದೇ ಇಸ್ರೇಲ್ ಬೆನ್ನಿಗೆ ನಿಂತು ಹೊಸ ದೇಶ ಕಟ್ಟಿಕೊಳ್ಳಲು ಸಹಾಯವನ್ನು ಮಾಡಿದ್ದೇ ಅಮೆರಿಕ. ಆ ನಂತರ ಅಮೆರಿಕ & ಇಸ್ರೇಲ್ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತಲೇ ಬರುತ್ತಾ ಇತ್ತು ಎನ್ನಬಹುದು. ಆದರೆ ಇರಾನ್ ವಿರುದ್ಧ ಯಾವಾಗ ಅಮೆರಿಕ & ಇಸ್ರೇಲ್ ಒಗ್ಗಟ್ಟಿನಿಂದ ಯುದ್ಧ ಸಾರಿದ್ದವೋ ಅಲ್ಲಿಂದ ಆಟ ಬದಲಾಗಿ ಹೋಗಿದ್ದು, ಅಮೆರಿಕ ಬೆನ್ನಿಗೆ ಇಸ್ರೇಲ್ ಚೂರಿ? ಇಲ್ಲಿದೆ ಭೀಕರ ಆರೋಪದ ವಿವರ…

ಹೌದು, ಅಮೆರಿಕ ರಕ್ಷಣಾ ಇಲಾಖೆ ಪೆಂಟಗನ್‌ ಇದೀಗ ಇಸ್ರೇಲ್‌ ಗುಪ್ತಚರ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಮತ್ತಷ್ಟು ಕಣ್ಣಿಟ್ಟು ಕಾಯುತ್ತಿದೆ ಎಂದು ವರದಿಯಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ಪ್ರಕ್ರಟಿಸಿರುವ ವರದಿಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ತಲ್ಲಣ ಎಬ್ಬಿಸಿವೆ, ಅದರಲ್ಲೂ ಇರಾನ್‌ ಮತ್ತು ಲೆಬನಾನ್‌ ಸಂಘರ್ಷಗಳು ಈ ರೀತಿ ಅಮೆರಿಕ & ಇಸ್ರೇಲ್ ನಡುವಿನ ಸಂಬಂಧ ಹಾಳಾಗಿ ಹೋಗಲು ಪ್ರಮುಖ ಕಾರಣ ಆಗುತ್ತಿದೆ ಎಂದು ವರದಿಯಾಗಿದೆ ಈಗ. NBC ನ್ಯೂಸ್ ಈ ಬಗ್ಗೆ ವರದಿ ಮಾಡಿದ್ದು, ಆದರೆ NBC ವರದಿಯಲ್ಲಿ ಇರುವ ಆರೋಪಗಳನ್ನು ಅಮೆರಿಕದಲ್ಲಿರುವ ಇಸ್ರೇಲ್‌ ರಾಯಭಾರ ಕಚೇರಿ ಮತ್ತು ಶ್ವೇತಭವನ ಎರಡೂ ತಳ್ಳಿಹಾಕಿವೆ. ಈ ಕುರಿತು ಪ್ರತಿಕ್ರಿಯಿಸಲು ಪೆಂಟಗನ್‌ ನಿರಾಕರಿಸಿದೆ. ಹೀಗಾಗಿಯೇ, ಇರಾನ್ ವಿರುದ್ಧದ ಸಂಘರ್ಷದ ಸಮಯದಲ್ಲೇ ದಿಢೀರ್ ಕುತೂಹಲವೂ ಕೆರಳಿದೆ ಪಾಶ್ಚಿಮಾತ್ಯ ದೇಶಗಳ ಒಗ್ಗಟ್ಟಿನ ಬಗ್ಗೆ.

Donald Trump Government May Angry Against Israel For This Reason Now
ಅಮೆರಿಕ ಬೆನ್ನಿಗೆ ಇಸ್ರೇಲ್ ಚೂರಿ? ಇಲ್ಲಿದೆ ಭೀಕರ ಆರೋಪದ ವಿವರ.

ಸ್ನೇಹಿತರ ನಡುವೆಯೇ ಕಿರಿಕ್ ಶುರು?
ಅಮೆರಿಕದ ಗುಪ್ತಚರ ಇಲಾಖೆಯ ಹಾಲಿ & ಮಾಜಿ ಅಧಿಕಾರಿಗಳ ಮಾಹಿತಿಯನ್ನೇ ಆಧಾರವಾಗಿ ಇಟ್ಟುಕೊಂಡು ವರದಿಯ ಮಾಡಿದೆ NBC ನ್ಯೂಸ್ ಎನ್ನಲಾಗಿದ್ದು, ಪೆಂಟಗನ್‌ನ ರಕ್ಷಣಾ ಗುಪ್ತಚರ ಸಂಸ್ಥೆ (DIA) ಇತ್ತೀಚಿನ ದಿನಗಳಲ್ಲಿ ಇಸ್ರೇಲ್‌ನಿಂದ ಉಂಟಾಗಬಹುದಾದ ಬೇಹುಗಾರಿಕೆ ಅಪಾಯದ ಕುರಿತು ತನ್ನ ಆಂತರಿಕ ಮೌಲ್ಯಮಾಪನ ಪರಿಷ್ಕರಿಸಿದೆ ಎಂದು ವರದಿಯು ತಿಳಿಸಿದೆ. ಪ್ರಮುಖವಾಗಿ ಮಧ್ಯಪ್ರಾಚ್ಯದ ಪ್ರಸಕ್ತ ಪರಿಸ್ಥಿತಿ ಇಷ್ಟಕ್ಕೆಲ್ಲಾ ಕಾರಣವಾಗುತ್ತಿದೆ, ಎಂಬುದು ಕೂಡ ಬಹುತೇಕ ಸ್ಪಷ್ಟ ಎನ್ನಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮೂಲಕ ಅಮೆರಿಕದ ಮಧ್ಯಪ್ರಾಚ್ಯ ನೀತಿ & ಪ್ರಾದೇಶಿಕ ಸಂಘರ್ಷಗಳಿಗೆ ಸಂಬಂಧಿಸಿದ ಸೂಕ್ಷ್ಮ ಚರ್ಚೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಇಸ್ರೇಲ್‌ನ ಪ್ರಯತ್ನಗಳು ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿವೆ ಎಂದು ವರದಿ ತಿಳಿಸಿದೆ. ಇರಾನ್‌ನ ವಿರುದ್ಧ ಯುದ್ಧ ಮಾಡುವ ಸಮಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಒಗ್ಗಟ್ಟಿನಿಂದ ಇದ್ದವು, ಆದರೆ ಯುದ್ಧ ನಿಂತ ಬಳಿಕ ಈ ರೀತಿಯ ತಿಕ್ಕಾಟ ಹೆಚ್ಚಾಗುತ್ತಿದೆ. ಅದರಲ್ಲೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇಸ್ರೇಲ್ ನಡೆ ಕುರಿತು ಇತ್ತೀಚೆಗೆ ಭಾರಿ ಆಕ್ರೋಶ ವ್ಯಕ್ತಪಡಸಿದ್ದರು ಎಂದು ವರದಿಯಾಗಿತ್ತು.

ಅಮೆರಿಕದಿಂದ ಹೆಚ್ಚುವರಿ ಭದ್ರತಾ ಕ್ರಮ
ಮತ್ತೊಂದು ಕಡೆ ಇಂತಹ ಆರೋಪಗಳ ಬೆನ್ನಲ್ಲೇ ಹೊಸ ಮೌಲ್ಯಮಾಪನದ ನಂತರ, ಇಸ್ರೇಲ್‌ಗೆ ಭೇಟಿ ನೀಡುವ ಅಥವಾ ಇಸ್ರೇಲಿ ಅಧಿಕಾರಿಗಳ ಭೇಟಿಯಾಗುವ ಅಮೆರಿಕ ಮೂಲದ ಅಧಿಕಾರಿಗಳು ಇನ್ನುಮುಂದೆ ಹೆಚ್ಚುವರಿ ಭದ್ರತಾ ಮುನ್ನೆಚ್ಚರಿಕೆ ಅನುಸರಿಸುವಂತೆ ಸೂಚನೆ ನೀಡಲಾಗಿದೆಯಂತೆ. ಅಂದಹಾಗೆ 1987ರ ಸಮಯದಲ್ಲಿ ಅಮೆರಿಕದ ನೌಕಾಪಡೆಯ ಗುಪ್ತಚರ ವಿಶ್ಲೇಷಕ ಜೋನಾಥನ್‌ ಪೊಲಾರ್ಡ್‌ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿತ್ತು, ಕೊನೆಗೆ ಶಿಕ್ಷೆಯೂ ಆಗಿತ್ತು.

ಜೋನಾಥನ್‌ ಪೊಲಾರ್ಡ್‌ ಅವರನ್ನು ಇಸ್ರೇಲ್‌ನ ಪರವಾಗಿ ಬೇಹುಗಾರಿಕೆ ನಡೆಸಿದ ಆರೋಪದಡಿ ಬಂಧಿಸಲಾಗಿತ್ತು. ನಂತರ ತಪ್ಪೊಪ್ಪಿಕೊಂಡು 30 ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು ಜೋನಾಥನ್‌ ಪೊಲಾರ್ಡ್‌. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅತ್ತ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಡುವೆ ಮುನಿಸು ಮುಂದುವರಿದ ಸಮಯದಲ್ಲೇ ಮತ್ತೊಂದು ಸ್ಪೋಟಕ ಆರೋಪ ಕೂಡ ಕೇಳಿಬಂದಿದೆ. ಹೀಗಿದ್ದಾಗ, ಹಳೆಯ ಘಟನೆಗಳನ್ನು ಮರೆಯದ ಅಮೆರಿಕದ ಅಧಿಕಾರಿಗಳು ಮತ್ತಷ್ಟು ಅಲರ್ಟ್ ಆಗಿದ್ದು ಹದ್ದಿನ ಕಣ್ಣಿಟ್ಟಿದ್ದಾರೆ ಇಸ್ರೇಲ್ ನಡೆಯ ಮೇಲೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular