ಪ್ರೇಕ್ಷಕರೊಂದಿಗೆ ಕುಳಿತು ‘ಹಾಸ್ಟೆಲ್ ಹುಡುಗರು…….’ ವೀಕ್ಷಿಸಿದ ಡಾಲಿ ಧನಂಜಯ್

ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹೊಸ ಪ್ರತಿಭೆಗಳ ಸಿನಿಮಾಗಳು ಪ್ರೇಕ್ಷಕರನ್ನು ಹೆಚ್ಚು ಸೆಳೆಯುತ್ತಿವೆ. ಇದೀಗ ’ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಕೂಡ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ.

ಯುವ ಪ್ರತಿಭೆಗಳ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಶಸ್ವಿ ಮೂರನೇ ವಾರದತ್ತ ಸಿನಿಮಾ ಮುನ್ನುಗ್ಗುತ್ತಿದೆ. ಕನ್ನಡ ಚಿತ್ರರಂಗದ ಘಟಾನುಘಟಿ ನಾಯಕರಾದ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ, ನೆನಪಿರಲಿ ಪ್ರೇಮ್, ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ, ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಸಂಯುಕ್ತಾ ಹೊರನಾಡ್ ಸೇರಿದಂತೆ ಹಲವರು ’ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನೋಡಿ ಮೆಚ್ಚಿದ್ದಾರೆ.

ಇದೀಗ ಡಾಲಿ ಧನಂಜಯ್, ಸಾಮಾನ್ಯ ಪ್ರೇಕ್ಷಕರ ಜೊತೆ ಥಿಯೇಟರ್ ನಲ್ಲಿ ಕುಳಿತು ಈ ಸಿನಿಮಾ ನೋಡಿದ್ದು, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೂರಾರು ಅಭಿಮಾನಿಗಳ ಜೊತೆ ಧನಂಜಯ್, ಸಿನಿಮಾ ನೋಡಿದ್ದು, ಚಿತ್ರದ ಪ್ರತಿ ಸನ್ನಿವೇಶ ಎಂಜಾಯ್ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಧನಂಜಯ್, ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಬದುಕು ಬಹಳ ಸಿಂಪಲ್ ಅನ್ನೋದನ್ನು ತೋರಿಸಿದ್ದಾರೆ. ನೋಡುಗರನ್ನು ನಗಿಸುತ್ತದೆ. ಪ್ರತಿಯೊಬ್ಬ ಹಾಸ್ಟೇಲ್ ಹುಡುಗರ ಜೀವನವನ್ನೂ ನೆನಪಿಸುತ್ತದೆ ಎಂದಿದ್ದಾರೆ.

ನಿತಿನ್ ಕೃಷ್ಣಮೂರ್ತಿ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಬಹುತೇಕ ರಂಗಭೂಮಿ ಕಲಾವಿದರೇ ಅಭಿನಯಿಸಿದ್ದಾರೆ. ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳು ಹಾಡಿ ಹೊಗಳುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read