 ಬೆಂಗಳೂರು : ಲಿಡ್ಕರ್ ಬ್ರಾಂಡ್ ರಾಯಭಾರಿಯಾಗಿ ನಟ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಬೆಂಗಳೂರು : ಲಿಡ್ಕರ್ ಬ್ರಾಂಡ್ ರಾಯಭಾರಿಯಾಗಿ ನಟ ಡಾಲಿ ಧನಂಜಯ್ ಆಯ್ಕೆಯಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರಾಂಡ್ ರಾಯಭಾರಿಯಾಗಿ ಘೋಷಣೆ ಮಾಡಿದರು.ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಟಗರು ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡ ನಟ ಧನಂಜಯ್ ನಂತರ ಡಾಲಿ ಧನಂಜಯ್ ಎಂದೇ ಫೇಮಸ್ ಆಗಿದ್ದರು. ಸಿನಿಮಾದಲ್ಲಿ ನಟಿಸುವುದರ ಮೂಲಕ ಧನಂಜಯ ಇದೀಗ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.
ಬಾಬಾ ಸಾಹೇಬರ ಕನಸು ನನಸಾಗಿಸುವ ಪ್ರತಿಜ್ಞೆ ಮಾಡೋಣ : ಸಿಎಂ
ಜಾತಿ, ಧರ್ಮ, ಲಿಂಗಾಧಾರಿತ ಶೋಷಣೆಯಿರದ ಸಮತೆಯ ಸಮಾಜ ನಿರ್ಮಾಣ ಡಾ|| ಬಿ.ಆರ್ ಅಂಬೇಡ್ಕರ್ ಅವರ ಕನಸಾಗಿತ್ತು. ಅವರು ತಮ್ಮ ಜ್ಞಾನ, ಅನುಭವ ಮತ್ತು ಆದರ್ಶಗಳನ್ನು ಸಂವಿಧಾನದ ರೂಪದಲ್ಲಿ ಧಾರೆಯೆರೆದಿದ್ದಾರೆ. ಸಂವಿಧಾನದ ಆಶಯಗಳಡಿ ಹೆಜ್ಜೆಹಾಕುವ ಮೂಲಕ ಬಾಬಾ ಸಾಹೇಬರ ಕನಸು ನನಸಾಗಿಸುವ ಪ್ರತಿಜ್ಞೆ ಮಾಡೋಣ. ನವ ಭಾರತದ ಶಿಲ್ಪಿ ಅಂಬೇಡ್ಕರರ ಪರಿನಿರ್ವಾಣ ದಿನದಂದು ಅವರನ್ನು ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 
		 
		 
		 
		 Loading ...
 Loading ... 
		 
		