ರಾತ್ರಿ ಈ ಕೆಲಸ ಮಾಡುವುದ್ರಿಂದ ಎದುರಾಗುತ್ತೆ ಸಂಕಷ್ಟ

ಜೀವನದಲ್ಲಿ ಸುಖ-ಶಾಂತಿ ಪ್ರಾಪ್ತಿಗಾಗಿ ಪುರಾಣದಲ್ಲಿ ನಿಯಮಗಳನ್ನು ಹೇಳಲಾಗಿದೆ. ವಿಷ್ಣು ಪುರಾಣದಲ್ಲಿ ಹೇಳಿದಂತೆ ಗೃಹಸ್ಥರು ಪಾಲನೆ ಮಾಡಿದ್ರೆ ವಿಷ್ಣು, ಮಹಾಲಕ್ಷ್ಮಿ ಜೊತೆ ಎಲ್ಲ ದೇವಾನುದೇವತೆಗಳು ಪ್ರಸನ್ನರಾಗ್ತಾರೆ. ಯಾರು ಈ ನಿಯಮಗಳನ್ನು ಪಾಲಿಸುವುದಿಲ್ಲವೋ ಅವರು ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಮೂರು ರಸ್ತೆ ಕೂಡುವ ಛೇದಕದ ಮೇಲೆ ರಾತ್ರಿ ಅವಶ್ಯವಿಲ್ಲವೆಂದ್ರೆ ಹೋಗಬೇಡಿ. ರಾತ್ರಿ ನಕಾರಾತ್ಮಕ ಶಕ್ತಿಗಳು ಪ್ರಭಾವ ಹೆಚ್ಚಿರುತ್ತದೆ. ಪವಿತ್ರ ಆತ್ಮ ಅಲ್ಲಿ ಓಡಾಡಿದ್ರೆ ಅದನ್ನು ನಕಾರಾತ್ಮಕ ಶಕ್ತಿಗಳು ಆಕರ್ಷಿಸುತ್ತವೆ.

ಸ್ಮಶಾನದಲ್ಲಿ ಯಾವಾಗ್ಲೂ ನಕಾರಾತ್ಮಕ ಶಕ್ತಿ ಪ್ರಭಾವವಿರುತ್ತದೆ. ಸ್ಮಶಾನಕ್ಕೆ ಹೋಗುವುದ್ರಿಂದ ಆರೋಗ್ಯ ಹಾಗೂ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ. ಸ್ಮಶಾನಕ್ಕೆ ಹೋಗಿ ಬಂದ ನಂತ್ರ ಅವಶ್ಯವಾಗಿ ಸ್ನಾನ ಮಾಡಬೇಕಾಗುತ್ತದೆ.

ರಾತ್ರಿ ಕೂದಲು ಹರಡಿ ಮಲಗುವ ಮಹಿಳೆಯರನ್ನು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ. ದೇಹ ಹಾಗೂ ಮನಸ್ಸು ಎರಡರ ಮೇಲೂ ಇದು ಪ್ರಭಾವ ಬೀರುತ್ತದೆ.

ಪರಿಮಳ ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ. ರಾತ್ರಿ ಪರಿಮಳಯುಕ್ತ ಸೆಂಟ್ ಹಾಗೂ ಡಿಯೋ ಹಾಕಿ ಮಲಗುವವರನ್ನು ನಕಾರಾತ್ಮಕ ಶಕ್ತಿ ಆಕರ್ಷಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read