SHOCKING NEWS: ಶ್ವಾನ ಪ್ರದರ್ಶನದ ವೇಳೆ ಪ್ರೇಕ್ಷಕರ ಮೇಲೆ ದಾಳಿ ನಡೆಸಿದ ರಾಟ್ ವೀಲರ್; ಓರ್ವನಿಗೆ ಗಂಭೀರ ಗಾಯ

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ದುಬಾರಿ ನಾಯಿ, ಡೇಂಜರಸ್ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗಿದೆ ಮಾತ್ರವಲ್ಲ, ಶ್ವಾನ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದೇ ರೀತಿ ಶ್ವಾನ ಪ್ರದರ್ಶನ ಆಯೋಜಿಸಿದ್ದ ವೇಳೆ ರಾಟ್ ವೀಲರ್ ನಾಯಿಯೊಂದು ಪ್ರೇಕ್ಷಕರ ಮೇಲೆ ಮನಸೋ ಇಚ್ಛೆ ದಾಳಿ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲುಕಿನಲ್ಲಿ ನಡೆದಿದ್ದ ಶ್ವಾನ ಪ್ರದರ್ಶನದ ವೇಳೆ ಈ ಅವಘಡ ಸಂಭವಿಸಿದೆ. ಶ್ವಾನ ಪ್ರದರ್ಶನಕ್ಕೆ ಬಂದಿದ್ದ ರಾಟ್ ವೀಲರ್ ನಾಯಿಯೊಂದು ಮಾಲೀಕನಿಂದ ತಪ್ಪಿಸಿಕೊಂಡು ಏಕಾಏಕಿ ಪ್ರೇಕ್ಷಕರತ್ತ ದಾಳಿ ಮಾಡಿದ್ದು, ಓರ್ವ ವ್ಯಕ್ತಿಯನ್ನು ಕಚ್ಚಿ ಗಾಯಗೊಳಿಸಿದೆ.

ಶರತ್ ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವವರು. ನಾಯಿ ದಾಳಿ ನಡೆಸಿ, ಕಚ್ಚಿದರೂ ಮಾಲೀಕರಾಗಲಿ, ಶ್ವಾನ ಪ್ರದರ್ಶನ ಆಯೋಜಕರಾಗಲಿ ಯಾರೂ ನೆರವಿಗೆ ಬಂದಿಲ್ಲ, ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸಲು ಹಿಂದೇಟು ಹಾಕಿದ್ದಾರೆ. ಶ್ವಾನ ಪ್ರದರ್ಶನ ಆಯೋಜಿಸುವವರು ಯಾವುದೇ ಸುರಕ್ಷತೆ, ಮುಂಜಾಗೃತಾ ಕ್ರಮ ಕೈಗೊಳ್ಳದಿರುವುದೇ ಈ ಘಟನೆಗೆ ಕಾರಣ ಎಂದು ಶರತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಗಾಯಾಳು ಶರತ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read