ಬೆಂಗಳೂರು: ವಿಶ್ವದ ಅತಿ ದುಬಾರಿ ನಾಯಿ ಒಡೆಯ, ಡಾಗ್ ಬ್ರೀಡರ್ ಸತೀಶ್ ಮನೆ ಬೇಲೆ ಜಾಅರಿ ನಿರ್ದೇಶನಲಾಯದ-ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
50 ಕೋಟಿ ರೂಪಾಯಿ ಕೊಟ್ಟು ವಿಶ್ವದ ಅತಿ ದುಬಾರಿ ಬೆಲೆಯ ಶ್ವಾನವನ್ನು ಖರೀದಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ಸತೀಶ್, ಅವರ ಬೆಂಗಳೂರಿನ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ಸತೀಶ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಇಂದು ಇಡಿ ದಾಳಿ ನಡೆಸಿದೆ.
ಈ ವೇಳೆ 50 ಕೋಟಿ ರೂಪಾಯಿ ಕೊಟ್ಟು ಸತೀಶ್ ನಾಯಿ ಖರೀದಿ ಮಾಡಿದ್ದು ಸುಳ್ಳು ಎಂಬುದು ಗೊತ್ತಾಗಿದೆ. ಕಾಡುತೋಳ ಮತ್ತು ಕಕೇಶಿಯನ್ ಶೆಫರ್ಡ್ ತಳಿಯ ಕ್ರಾಸ್ ಬ್ರೀಡ್ ಅವರ ಬಳಿ ಇರುವ ಶ್ವಾನ ಎಂದು ತಿಳಿದುಬಂದಿದೆ.
ಕ್ಯಾಡಾಬೊಮ್ಸ್ ಹೇಡರ್ ಹೆಸರಿನ ಕಕೇಶಿಯನ್ ಶೆಫರ್ಡ್ ಬರೋಬ್ಬರಿ 100 ಕೆಜಿ ತೂಕವಿದೆ. ನೋಡಲು ಸಿಂಹದಂತೆ ಕಾಣುವ ಈಶ್ವಾನದ ತಲೆಯ ಗಾತ್ರ 38 ಇಂಚು, ಭುಜಗಳು 34 ಇಂಚುಗಳಿವೆ. ಶ್ವಾನದ ಕಾಲುಗಳು 2 ಲೀಟರ್ ಜ್ಯೂಸ್ ಬಾಟಲಿ ಗಾತ್ರದಷ್ಟು ದೊಡ್ಡದಾಗಿದೆ. ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರ ಮಧ್ಯೆ ಇರುವ ಕಕೇಷ್ಯಾ ಪ್ರಾಂತ್ಯದ ಬಳಿ ಇರುವ ಕಕೇಷಯನ್ ಶಫರ್ಡ್ ಶ್ವಾನಗಳನ್ನು ಜಾನುವಾರುಗಳ ರಕ್ಷಣೆಗೆ ಸಾಅಕುತ್ತಾರೆ. ಈ ತಳಿಯ ಶ್ವಾನ ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್, ಒಸ್ಸೆಟಿಯಾ, ಸರ್ಕಾಸಿಯಾ, ಟರ್ಕಿ, ರಷ್ಯಾ ದೇಶಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಈ ತಳಿಯ ನಾಯಿಗಳು ನೋಡಲು ಸಿಗುವುದು ಅಪರೂಪ ಎಂದು ಈ ಹಿಂದೆ ಸತೀಶ್ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು.