ಹೆಂಡತಿ ಸುಂದರವಾಗಿ ಕಾಣ್ತಿಲ್ವಾ…..? ಇದಕ್ಕೊಂದು ಉಪಾಯ ಹೇಳಿದ್ದಾರೆ ಚಾಣಕ್ಯ

ಸುಂದರ ಮಡದಿಯನ್ನು ಪಡೆಯುವುದು ಪ್ರತಿಯೊಬ್ಬ ಪುರುಷನ ಕನಸು. ಸುಂದರ ಹುಡುಗಿ ತನ್ನ ಹೆಂಡತಿಯಾಗಿ ಬರಬೇಕೆಂದು ಎಲ್ಲರೂ ಬಯಸ್ತಾರೆ. ಆತ ಸುಂದರವಾಗಿರಲಿ, ಬಿಡಲಿ, ಮಡದಿ ಮಾತ್ರ ಸುಂದರವಾಗಿರಬೇಕು. ಆದ್ರೆ ಎಲ್ಲ ಪುರುಷರಿಗೂ ಸುಂದರವಾಗಿರುವ ಹೆಂಡತಿ ಸಿಗಲು ಸಾಧ್ಯವಿಲ್ಲ. ಚಾಣಕ್ಯ ಇದಕ್ಕೊಂದು ಉಪಾಯ ಹೇಳಿದ್ದಾರೆ. ಅವರು ಹೇಳಿದ ಮಾತುಗಳನ್ನು ಪಾಲಿಸಿದ್ರೆ ಪ್ರತಿಯೊಬ್ಬ ಪುರುಷನಿಗೂ ತನ್ನ ಪತ್ನಿ ಸುಂದರವಾಗಿಯೇ ಕಾಣ್ತಾಳೆ.

ಆಚಾರ್ಯ ಚಾಣಕ್ಯನ ನೀತಿಗಳು :

ಮೊದಲು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ : ಯಾವ ಪುರುಷನಿಗೆ ತನ್ನ ಪತ್ನಿ ಸುಂದರವಾಗಿಲ್ಲ ಎನ್ನಿಸುತ್ತದೆಯೋ ಆ ಪುರುಷ ಎದ್ದ ತಕ್ಷಣ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಬೇಕು. ಆಗ ಆತನಲ್ಲಿರುವ ಕೊರತೆ ತಿಳಿಯುತ್ತದೆ. ವ್ಯಕ್ತಿ ಸರ್ವಗುಣ ಸಂಪನ್ನನಾಗಿರುವುದಿಲ್ಲ ಎನ್ನುತ್ತಾರೆ ಚಾಣಕ್ಯ.

ಪತ್ನಿಯ ವ್ಯವಹಾರದ ಬಗ್ಗೆ ಯೋಚಿಸಿ : ಪ್ರತಿಯೊಬ್ಬ ಪುರುಷ ತನ್ನ ಪತ್ನಿಯ ವ್ಯವಹಾರ, ಒಳ್ಳೆಯ ಗುಣ ಹಾಗೂ ಪ್ರೀತಿ  ಮಾತುಗಳ ಬಗ್ಗೆ ಗಮನ ನೀಡಬೇಕು. ಆಗ ಆತನಿಗೆ ಪತ್ನಿ ಮೇಲೆ ಪ್ರೀತಿ ಹೆಚ್ಚಾಗುತ್ತದೆ.

ನಿಮಗೆ ಅವಮಾನ ಮಾಡಿದ ಸ್ತ್ರೀಯನ್ನು ಸ್ಮರಿಸಿ : ಒಂದಾನೊಂದು ಸಮಯದಲ್ಲಿ ನಿಮಗೆ ಯಾವುದಾದ್ರೂ ಒಬ್ಬ ಮಹಿಳೆ ಅವಮಾನ ಮಾಡಿರ್ತಾಳೆ. ಆಕೆ ಮಾಡಿದ ಅವಮಾನವನ್ನು ಸ್ಮರಿಸಿದಾಗ ನಿಮಗೆ ನಿಮ್ಮ ಹೆಂಡತಿ ಬೆಸ್ಟ್ ಎನ್ನಿಸುತ್ತದೆ.

ಜೀವನದ ಕಠಿಣ ಸಮಯವನ್ನು ನೆನೆಯಿರಿ : ನಿಮ್ಮ ಹೆಂಡತಿ ಚೆನ್ನಾಗಿಲ್ಲ ಎಂದೆನಿಸಿದಾಗ ನೀವು ಕಷ್ಟದ ದಿನಗಳನ್ನು ನೆನಪು ಮಾಡಿಕೊಳ್ಳಿ. ಆಗ ನಿಮ್ಮ ಹೆಂಡತಿ ಮಾಡಿದ ಸಹಾಯ, ಪ್ರೋತ್ಸಾಹ ನಿಮಗೆ ಮಡದಿ ಮೇಲೆ ಪ್ರೀತಿ ಹುಟ್ಟುವಂತೆ ಮಾಡುತ್ತದೆ.

ಹೆಂಡತಿಗೆ ಹೇಳದ ಗುಟ್ಟನ್ನು ನೆನಪಿಸಿಕೊಳ್ಳಿ : ಪ್ರತಿಯೊಬ್ಬ ಪುರುಷ ಚಂಚಲನಾಗಿರ್ತಾನೆ. ಮಡದಿ ಇದ್ದೂ ಕೆಲವೊಮ್ಮೆ ತಪ್ಪು ಮಾಡಿರ್ತಾನೆ. ಇದು ಆಕೆಗೆ ತಿಳಿದಿರುವುದಿಲ್ಲ. ಮಡದಿ ಸುಂದರವಾಗಿಲ್ಲ ಎಂದೆನಿಸಿದ ಸಮಯದಲ್ಲಿ ಪುರುಷ ತನ್ನ ಆ ತಪ್ಪನ್ನು ನೆನೆಸಿಕೊಳ್ಳಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read