ʼಸನ್‌ರೂಫ್ʼ ಕಾರಿನ ಸುರಕ್ಷತೆಗೆ ಧಕ್ಕೆ ತರುತ್ತದೆಯೇ ? ಇಲ್ಲಿದೆ ತಜ್ಞರ ಅಭಿಪ್ರಾಯ

ಸನ್‌ರೂಫ್, ಐಷಾರಾಮಿ ಕಾರುಗಳಲ್ಲಿರುವ ವಿಶೇಷತೆಗಳಲ್ಲೊಂದು. ಇದು ಬಹಳ ಜನಪ್ರಿಯ ಫೀಚರ್‌ ಆಗಿ ಹೊರಹೊಮ್ಮಿದೆ. ಕಾರಿನಲ್ಲಿ ಕುಳಿತು ಆಗಸವನ್ನು ಆಸ್ವಾದಿಸಲು ಸನ್‌ರೂಫ್‌ ಉತ್ತಮ ಅವಕಾಶ ಕಲ್ಪಿಸುತ್ತದೆ. ಆದರೆ ಸನ್‌ರೂಫ್ ಅಳವಡಿಸುವುದರಿಂದ ಕಾರಿನ ರಚನಾತ್ಮಕ ಶಕ್ತಿ ಕಡಿಮೆಯಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ಸುರಕ್ಷತೆಗೂ ಇದು ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ರೆ ಸನ್‌ರೂಫ್‌ ಕುರಿತ ಈ ಗೊಂದಲ ಎಷ್ಟು ನಿಜ ಅನ್ನೋದನ್ನು ನೋಡೋಣ.

ಸನ್‌ರೂಫ್ ಕಾರಿನ ರಚನಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆಯೇ ?

ಸನ್‌ರೂಫ್ ಅಳವಡಿಸಲು ಲೋಹದ ಕೆಲವು ಭಾಗವನ್ನು ಕಾರಿನ ಛಾವಣಿಯಿಂದ ತೆಗೆದು ಹಾಕಲಾಗುತ್ತದೆ, ಅಲ್ಲಿ ಗಾಜನ್ನು ಹಾಕಲಾಗುತ್ತದೆ. ಈ ರೀತಿ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಕಾರಿನ ಸ್ಟ್ರಕ್ಚರಲ್‌ ಸ್ಟ್ರೆಂತ್‌ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಾರು ಕಂಪನಿಗಳು ಈ ಬಗ್ಗೆ ಗಮನಹರಿಸುತ್ತವೆ. ಸನ್‌ರೂಫ್‌ಗಳನ್ನು ಅಳವಡಿಸುವುದರಿಂದ ಕಾರಿನ ಒಟ್ಟಾರೆ ಸುರಕ್ಷತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕಾರಿನಲ್ಲಿ ಕಂಪನಿಯೇ ಖುದ್ದು ಸನ್‌ರೂಫ್‌ ಅಳವಡಿಸಿದ್ದರೆ ಅದು ಸೂಕ್ತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಅದನ್ನು ಪ್ರತ್ಯೇಕವಾಗಿ ಅಳವಡಿಸಿಕೊಳ್ಳಬೇಡಿ. ಈ ರೀತಿ ಮಾಡಿದರೆ ಕಾರಿನ ಸುರಕ್ಷತೆಗೆ ಧಕ್ಕೆಯಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read