ಮೈಸೂರು: ಕಾಡು ಹಂದಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಅವುತರನ್ನು ಸಸ್ಪೆಂಡ್ ಮಾಡಿರುವ ಘಟನೆ ನಡೆದಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ ಬೇಟೆಯಾಡುತ್ತಿದ್ದ ಆರೋಪದಲ್ಲಿ ಮಾವುತರನ್ನು ಸಸ್ಪೆಂಡ್ ಮಾಡಲಾಗಿದೆ. ಹುಣಸೂರು ವಿಭಾಗದ ದೊಡ್ಡ ಹರವೇ ಆನೆ ಶಿಬಿರದ ಮಾವುತರಾದ ಹೆಚ್.ಎನ್.ಮಮ್ಜು, ಜೆಡಿ.ಡಿ.ಮಂಜು ಅಮಾನತುಗೊಂಡವರು.
ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಸೀಮಾ ಆದೇಶ ಹೊರಡಿಸಿದ್ದಾರೆ. ಮಾವುತರಿಬ್ಬರೂ ಶಿಬಿರದ ವಸತಿಗೃಹದಲ್ಲಿ ಬಂದೂಕು ಇಟ್ಟುಕೊಂಡು ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ ಎಂಬ ಆರೋಪದ ಮೇರೆಗೆ ತನಿಖೆ ನಡೆಸಿದ ವೇಳೆ ಬಂದೂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಸಸ್ಪೆಂಡ್ ಮಾಡಲಾಗಿದೆ.