ರಾತ್ತಿ ಮಲಗೋ ಸಮಯದಲ್ಲೂ ನಿಮ್ಮ ಮಕ್ಕಳು ಮೊಬೈಲ್ ನಲ್ಲಿ ಗೇಮ್ ಆಡ್ತಾರಾ..?‌ ಹಾಗಾದ್ರೆ ಓದಿ ಈ ಸುದ್ದಿ

ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ. ನಿಮ್ಮ ಮಕ್ಕಳಲ್ಲೂ ಇಂತಹ ಅಭ್ಯಾಸವಿದ್ರೆ ಆದಷ್ಟು ಬೇಗ ಅದನ್ನು ಬಿಡಿಸಿ, ಇಲ್ಲದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ.

ಯಾಕಂದ್ರೆ ಮಲಗೋ ಸಮಯದಲ್ಲಿ ಮೊಬೈಲ್ ಬಳಸಿದ್ರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ನಿದ್ರಾ ಹೀನತೆಯ ಜೊತೆಗೆ ಒಬೆಸಿಟಿಯಂತಹ ಅಪಾಯಕಾರಿ ಖಾಯಿಲೆಗಳು ಬರುವ ಸಾಧ್ಯತೆ ಇದೆ. ಸಂಶೋಧನೆಯಲ್ಲಿ ಈ ಅಂಶ ಬಯಲಾಗಿದೆ.

ರಾತ್ರಿ ಮೊಬೈಲ್ ನಲ್ಲಿ ಆಟವಾಡುತ್ತ ಸಮಯ ಕಳೆಯೋ ಮಕ್ಕಳು ಸರಿಯಾದ ಸಮಯಕ್ಕೆ ಮಲಗುವುದಿಲ್ಲ. ಇದರಿಂದ ಹಗಲಿನಲ್ಲಿ ಅವರಿಗೆ ನಿದ್ದೆಯ ಜೊಂಪು ಆವರಿಸಬಹುದು. ನಿದ್ದೆ ಮಕ್ಕಳ ಬೆಳವಣಿಗೆಗೆ ಅತ್ಯಂತ ಅವಶ್ಯಕ, ನಿದ್ರೆಯ ಕೊರತೆಯಿಂದ ಹಲವು ರೋಗಗಳು ಬರುವ ಸಾಧ್ಯತೆಗಳಿರುತ್ತವೆ.

ಸದ್ಯ ಶೇ.72 ರಷ್ಟು ಮಕ್ಕಳು ಮಲಗುವ ಸಮಯದಲ್ಲಿ ಮೊಬೈಲ್ ಅನ್ನು ಆಟಿಕೆಯಂತೆ ಬಳಸುತ್ತಿರುವುದು ಅಪಾಯಕಾರಿ ಬೆಳವಣಿಗೆ ಅಂತಾ ಸಂಶೋಧನೆಯಲ್ಲಿ ಹೇಳಲಾಗಿದೆ. ನಿದ್ರೆಯ ಕೊರತೆ ಮಕ್ಕಳ ಮಾನಸಿಕ ಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ ಅಂತಾ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮಕ್ಕಳಲ್ಲಿ ಇಮ್ಯುನಿಟಿಯ ಕೊರತೆ, ಹಠಮಾರಿತನದಲ್ಲಿ ಹೆಚ್ಚಳ, ಬೆಳವಣಿಗೆ ಕುಂಠಿತ ಇವೆಲ್ಲದಕ್ಕೂ ಮೊಬೈಲ್ ಕಾರಣವಾಗಬಲ್ಲದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read