ಸ್ಟೈಲಿಶ್ ಕೂದಲನ್ನು ಪಡೆಯಲು ಹೇರ್ ಸ್ಪ್ರೇ ಬಳಸುತ್ತೀರಾ……? ತಿಳಿದುಕೊಳ್ಳಿ ಈ ವಿಚಾರ

ಸ್ಟೈಲಿಶ್ ಕೂದಲನ್ನು ಪಡೆಯಲು ಜನರು ಸಾಮಾನ್ಯವಾಗಿ ಹೇರ್ ಸ್ಪ್ರೇಯನ್ನು ಬಳಸುತ್ತಾರೆ. ಆದರೆ ಹೇರ್ ಸ್ಪ್ರೇ ಬಳಕೆಯಿಂದ ಕೂದಲಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ಇದರಿಂದ ಕೂದಲಿನ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಸ್ಟೈಲಿಶ್ ಕೂದಲನ್ನು ಪಡೆಯಲು ಹೇರ್ ಸ್ಪ್ರೇ ಬಳಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ.

ನೀವು ಅತಿಯಾಗಿ ಹೇರ್ ಸ್ಪ್ರೇ ಬಳಸಿದರೆ ಕೂದಲ ಉದುರುವಿಕೆಗೆ ಕಾರಣವಾಗಬಹುದು. ಯಾಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳಿವೆ. ಇವು ಕೂದಲನ್ನು ಹಾನಿಗೊಳಿಸುತ್ತದೆ. ಹೇರ್ ಸ್ಪ್ರೇ ಬಳಸಿದ ನಂತರ ಕೂದಲನ್ನು ಬಾಚಿಕೊಳ್ಳುವುದು ಕೂಡ ಕೂದಲಿನ ಹಾನಿಗೆ ಕಾರಣವಾಗುತ್ತದೆ. ಮತ್ತು ಇದರ ಅತಿಯಾದ ಬಳಕೆ ನೆತ್ತಿಯ ತುರಿಕೆಗೆ ಕಾರಣವಾಗುತ್ತದೆ.

ಹಾಗಾಗಿ ಹೇರ್ ಸ್ಪ್ರೇ ಬಳಸುತ್ತಿದ್ದರೆ ಅದರಲ್ಲಿ ಹೆಚ್ಚಿನ ರಾಸಾಯನಿಕಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೇರ್ ಸ್ಪ್ರೇಯನ್ನು ಪದೇ ಪದೇ ಬಳಸಬೇಡಿ, ಅವಶ್ಯಕತೆಯಿದ್ದಾಗ ಮಾತ್ರ ಬಳಸಿ. ಹಾಗೇ ಮನೆಯಲ್ಲಿಯೇ ತಯಾರಿಸಿದ ಹೇರ್ ಸ್ಪ್ರೇಗಳನ್ನು ಬಳಸಿ. ಆಲ್ಕೋಹಾಲ್ ಮುಕ್ತ ಹೇರ್ ಸ್ಪ್ರೇ ಕೂದಲಿಗೆ ತುಂಬಾ ಉತ್ತಮ ಎಂಬುದನ್ನು ನೆನಪಿಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read