ʼಮಲ್ಟಿ ವಿಟಮಿನ್ʼ ಮಾತ್ರೆ ಸೇವಿಸ್ತೀರಾ……? ಹಾಗಾದ್ರೆ ಇರಲಿ ಈ ಬಗ್ಗೆ ಗಮನ

ದೇಹದಲ್ಲಿನ ಪೌಷ್ಟಿಕಾಂಶಗಳ ಕೊರತೆಯನ್ನು ಪೂರೈಸಲು ಕೆಲವರು ಮಲ್ಟಿ ವಿಟಮಿನ್ ಅನ್ನು ತೆಗೆದುಕೊಳ್ಳುತ್ತಾರೆ. ದೇಹಕ್ಕೆ ವಿಟಮಿನ್ ಗಳು ಬಹಳ ಮುಖ್ಯ ನಿಜ. ಆದರೆ ಕೆಲವೊಮ್ಮೆ ಹೆಚ್ಚಿನ ವಿಟಮಿನ್ ಗಳು ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ. ಹಾಗಾಗಿ ಮಲ್ಟಿ ವಿಟಮಿನ್ ಸೇವಿಸುವಾಗ ಈ ಸಲಹೆ ಪಾಲಿಸಿ.

ಮಲ್ಟಿ ವಿಟಮಿನ್ ಮಾತ್ರೆಗಳನ್ನು ಸೇವಿಸುವ ಮೊದಲು ನಿಮಗೆ ಜೀವಸತ್ವಗಳ ಅಗತ್ಯವಿದೆಯೇ? ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಬೇಕು. ಅದಕ್ಕಾಗಿ ವೈದ್ಯರನ್ನು ಭೇಟಿ ಮಾಡಿ. ವೈದ್ಯರ ಸಲಹೆ ಮೇರೆಗೆ ಮಲ್ಟಿ ವಿಟಮಿನ್ ಗಳನ್ನು ತೆಗೆದುಕೊಳ್ಳಿ. ಇದರಿಂದ ಅದರಿಂದಾಗುವ ಹಾನಿಯನ್ನು ತಪ್ಪಿಸಬಹುದು.

ಮಲ್ಟಿ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ಜನರು ಕಡಿಮೆ ಆಹಾರ ಸೇವಿಸುತ್ತಾರೆ. ಯಾಕೆಂದರೆ ಮಲ್ಟಿ ವಿಟಮಿನ್ ಮಾತ್ರೆಯಿಂದ ತಮಗೆ ವಿಟಮಿನ್ ಗಳು ಸಿಗುತ್ತಿವೆ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು ಮಲ್ಟಿ ವಿಟಮಿನ್ ಮಾತ್ರೆಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ನೀಡುವುದಿಲ್ಲ, ಹಾಗಾಗಿ ನೀವು ಹಣ್ಣುಾಗಳು, ತರಕಾರಿ, ಧಾನ್ಯಗಳು, ನಟ್ಸ್, ಮಾಂಸಗಳನ್ನು ಸೇವಿಸಲೇಬೇಕು.

ನೀವು ಈಗಾಗಲೇ ಯಾವುದೇ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಮಲ್ಟಿ ವಿಟಮಿನ್ ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ. ಇದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು. ಹಾಗಾಗಿ ವೈದ್ಯರ ಸಲಹೆಯಂತೆ ಸೇವಿಸಿ ಮತ್ತು ಮಲ್ಟಿ ವಿಟಮಿನ್ ಮಾತ್ರೆಗಳನ್ನು ಯಾವಾಗ ಸೇವಿಸಬೇಕು, ತಿಂದ ನಂತರ ಯಾವ ಆಹಾರ ಸೇವಿಸಬೇಕು ಎಂಬುದರ ಬಗ್ಗೆ ಕಾಳಜಿ ವಹಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read