ತೂಕ ಕಡಿಮೆ ಮಾಡಿಕೊಳ್ಳಲು ರಾತ್ರಿ ಊಟ ಬಿಡ್ತೀರಾ….? ಎಚ್ಚರ ಇದರಿಂದಾಗುತ್ತೆ ಆರೋಗ್ಯಕ್ಕೆ ಹಾನಿ…..!

ತೂಕ ಕಡಿಮೆ ಮಾಡಿಕೊಳ್ಳಬೇಕೆಂಬ ಹಟಕ್ಕೆ ಬೀಳುವ ಕೆಲವರು ರಾತ್ರಿ ಊಟವನ್ನು ಬಿಟ್ಟು ಬಿಡುತ್ತಾರೆ. ಇದು ನಿಜಕ್ಕೂ ಒಳ್ಳೆಯದಲ್ಲ. ಇದರಿಂದ ಆರೋಗ್ಯ ಸಮಸ್ಯೆಗಳು ಬಿಗಡಾಯಿಸುತ್ತದೆಯೇ ಹೊರತು ನಿವಾರಣೆಗೊಳ್ಳುವುದಿಲ್ಲ.

ರಾತ್ರಿ ಊಟ ಬಿಡುವ ನೆಪದಲ್ಲಿ ಸಂಜೆ ವೇಳೆ ಸ್ನಾಕ್ಸ್ ತಿನ್ನುವ ಮಂದಿ ತಮಗೇ ಅರಿವಿಲ್ಲದಂತೆ ಹೆಚ್ಚುವರಿ ಕೊಬ್ಬನ್ನು ಸೇವಿಸಿರುತ್ತಾರೆ. ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಹಾಗೆ ಮಾಡುವುದರ ಬದಲು ಸಂಜೆ ಏಳರ ಒಳಗೆ ಆರೋಗ್ಯಕರ ಆಹಾರವನ್ನು ಸೇವಿಸಿ. ರಾತ್ರಿ ಬೆಚ್ಚಗಿನ ನೀರು ಅಥವಾ ತೆಳ್ಳಗಿನ ಹಾಲು ಕುಡಿದು ಮಲಗಿ. ಸಂಜೆಯ ವೇಳೆ ಸ್ನಾಕ್ಸ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಹೀಗಿದ್ದೂ ರಾತ್ರಿ ವೇಳೆ ಏನೂ ತಿನ್ನುವುದಿಲ್ಲ ಎಂದು ನಿಶ್ಚಯಿಸಿಕೊಂಡವರು ಮಧ್ಯಾಹ್ನದ ಊಟಕ್ಕೆ ಸಾಕಷ್ಟು ಕ್ಯಾಲೊರಿಗಳನ್ನು ಸೇವಿಸಲು ಮರೆಯದಿರಿ. ಸಂಜೆ ಸಾಕಷ್ಟು ಪ್ರಮಾಣದಲ್ಲಿ ನೀರು ಅಥವಾ ದ್ರವಾಹಾರ ಸೇವಿಸುವುದನ್ನು ಮರೆಯದಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read