ನಿತ್ಯ ಕುಡಿಯಬೇಕು ಸೌತೆಕಾಯಿ ಜ್ಯೂಸ್ ಯಾಕೆ ಗೊತ್ತಾ…..?

ಸೌತೆಕಾಯಿಯನ್ನು ತಿನ್ನಲು ಯಾರು ಇಷ್ಟಪಡುವುದಿಲ್ಲ ಹೇಳಿ. ವರ್ಷಪೂರ್ತಿ ಕಡಿಮೆ ದರದಲ್ಲಿ ದೊರೆಯುವುದಲ್ಲದೇ ಸತ್ವಯುತವಾಗಿರುತ್ತದೆ. ಸೌತೆಕಾಯಿಯಲ್ಲಿ ನೀರಿನ ಅಂಶ, ವಿಟಮಿನ್ ಕೆ, ಸಿ, ಎ, ಸಿಲಿಕಾ ಮತ್ತು ಕ್ಲೋರೋಫಿಲ್ ಎನ್ನುವ ಅಂಶವಿರುತ್ತದೆ. ಹೀಗಾಗಿ ಇದರ ಜ್ಯೂಸ್ ಪ್ರತಿ ದಿನ ಕುಡಿದರೆ ಏನೆಲ್ಲಾ ಪ್ರಯೋಜನವಿದೆ ತಿಳಿಯಿರಿ.

* ಸೌತೆಕಾಯಿ ಜ್ಯೂಸ್ ಪ್ರತಿನಿತ್ಯ ಕುಡಿಯುವುದು ಆರೋಗ್ಯಕರ. ಅಷ್ಟೇ ಅಲ್ಲದೆ ಕಿಡ್ನಿಸ್ಟೋನ್‌ ನಿವಾರಣೆಗೆ ರಾಮಬಾಣವಾಗಿದೆ.

* ಪ್ರತಿನಿತ್ಯ ಒಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಸೇವನೆಯಿಂದ ದೇಹದಲ್ಲಿ ವಿಷಕಾರಿ ವಸ್ತುಗಳು ಹೊರಹೊಗಲು ನೆರವಾಗುತ್ತದೆ.

* ಪ್ರತಿನಿತ್ಯ ಒಂದು ಗ್ಲಾಸ್ ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ಕ್ಯಾನ್ಸರ್ ರೋಗದಿಂದ ಮುಕ್ತರಾಗಬಹುದು.

* ದೇಹದ ಭಾರದಿಂದ ಬಳಲುತ್ತಿರುವವರು ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು. ಇದರಲ್ಲಿ ಲೋ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವಿರುವುದರಿಂದ ಹೆಚ್ಚುವರಿ ಬೊಜ್ಜು ನಿವಾರಣೆಗೆ ಸಹಕಾರಿಯಾಗುತ್ತದೆ.

* ಸೌತೆಕಾಯಿ ಜ್ಯೂಸ್ ಸೇವಿಸುವುದರಿಂದ ಪಚನ ಕ್ರಿಯೆ ಸುಲಭವಾಗುತ್ತದೆ.

* ಸೌತೆಕಾಯಿಯಲ್ಲಿ ಸಕ್ಕರೆ, ಬಿ ವಿಟಮಿನ್, ಎಲೆಕ್ಟ್ರೋಲೈಟ್ಸ್ ಇರುವುದರಿಂದ ಹ್ಯಾಂಗೋವರ್ ಡ್ರಿಂಕ್ಸ್‌ನಿಂದ ಬಳಲುತ್ತಿರುವವರಿಗೆ ನಿರಾಳತೆ ದೊರಕುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read