ಗರ್ಭದಲ್ಲಿರುವ ಮಗು ಒದೆಯುವುದು ಯಾಕೆ ಗೊತ್ತಾ……?

ಗರ್ಭದಲ್ಲಿರುವ ಮಗು ಮೊದಲ ಬಾರಿ ಒದೆಯುವುದು, ಚಲಿಸುವುದು ಮಾಡಿದಾಗ ತಾಯಿಯಾದವಳಿಗೆ ಸಿಗುವ ಅನುಭವವೇ ಅನನ್ಯವಾದದ್ದು. ಮಗು ತಾನು ಬೆಳೆಯುತ್ತಿರುವುದನ್ನು ಸೂಚಿಸಲು ಈ ಎಲ್ಲಾ ಚಟುವಟಿಕೆಗಳನ್ನು ಮಾಡುತ್ತಿರುತ್ತದೆ.

ಸಾಮಾನ್ಯವಾಗಿ ಈ ಒದೆತಗಳು 20 ವಾರಗಳ ಬಳಿಕ ಆರಂಭಗೊಳ್ಳುತ್ತದೆ. ಮೂರನೇ ತ್ರೈಮಾಸಿಕದಲ್ಲಿ ಈ ಕಿಕ್ ಗಳು ಸ್ವಲ್ಪ ಕಡಿಮೆ ಇರಬಹುದು. ಏಕೆಂದರೆ ಮಗು ಹೊಟ್ಟೆಯ ಒಳಭಾಗದ ತುಂಬಾ ತುಂಬಿಕೊಂಡಿರುತ್ತದೆ.

ಹೀಗಿದ್ದೂ ಮಗುವಿನ ಚಲನೆ ಕಂಡು ಬರುತ್ತಿಲ್ಲ ಎಂಬುದು ತಿಳಿದಾಕ್ಷಣ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಸಾಮಾನ್ಯವಾಗಿ ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಸಕ್ರಿಯವಾಗಿರುತ್ತಾರೆ. ಆ ಸಮಯದಲ್ಲಿ ಚಲನೆಯನ್ನು ಗಮನಿಸಿ.

ಸತತ ಒಂದು ಗಂಟೆ ಹೊತ್ತು ಕಿಕ್ ಕಾಣಿಸದಿದ್ದರೆ ಜ್ಯೂಸ್ ಕುಡಿಯಿರಿ ಇಲ್ಲವೇ ಸಿಹಿ ತಿನ್ನಿ. ಬಲಬದಿಗೆ ಮಲಗಿ. ಆಗಲೂ ಚಲನೆ ಕಾಣಿಸದಿದ್ದರೆ ವೈದ್ಯರನ್ನು ಭೇಟಿ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read