ತಲೆನೋವು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ಕಾಡಲು ಕಾರಣವೇನು ಗೊತ್ತಾ……?

ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರನ್ನು ತಲೆನೋವು ಹೆಚ್ಚು ಕಾಡುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ. ಹಾರ್ಮೋನು ಬದಲಾವಣೆ ಮಹಿಳೆಯರ ತಲೆನೋವಿಗೆ ಮುಖ್ಯ ಕಾರಣ.

ತಲೆನೋವಿಗೆ ನಿಮ್ಮ ಒತ್ತಡ ಕೂಡ ಕಾರಣ. ತಲೆಯ ಎರಡೂ ಭಾಗಗಳಲ್ಲಿ ನೋವು ಕಾಣಿಸಿಕೊಂಡ್ರೆ ಒತ್ತಡದಿಂದ ಬಳಲುತ್ತಿದ್ದೀರಿ ಎಂದರ್ಥ. ಟೆನ್ಷನ್ ಮಾಡಿಕೊಂಡ್ರೆ ತಲೆಯ ಎರಡೂ ಭಾಗಗಳಲ್ಲಿ ನೋವು ಬರುತ್ತದೆ.

ಒಂದು ವೇಳೆ ಬ್ರೇನ್ ಇರುವ ಭಾಗದಲ್ಲಿ ನೋವು ಕಾಣಿಸಿಕೊಂಡ್ರೆ ಇದು ಸಾಮಾನ್ಯ ತಲೆನೋವಲ್ಲ. ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಮಿದುಳಿನ ಭಾಗದಲ್ಲಿ ನೋವು ಕಾಣಿಸಿಕೊಂಡ್ರೆ ಮೈಗ್ರೇನ್ ಆಗಿರುವ ಸಾಧ್ಯತೆಯೂ ಇದೆ.

ಹಲವು ಬಾರಿ ತಲೆ ನೋವಿಗೆ ತಲೆಯೇ ಕಾರಣವಾಗಿರುವುದಿಲ್ಲ. ನಿಮ್ಮ ಹೊಟ್ಟೆ ಕೂಡ ತಲೆನೋವಿಗೆ ಕಾರಣವಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ಸರಿಯಾಗಿರದೆ ಹೋದಲ್ಲಿ ತಲೆನೋವು ಕಾಣಿಸಿಕೊಳ್ಳುತ್ತದೆ. ತಲೆಯ ಒಂದು ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡ್ರೆ ಅದು ಅತಿಸಾರ, ಬೇಧಿ ಲಕ್ಷಣವೂ ಆಗಿರಬಹುದು.

ತುಂಬಾ ಸಮಯ ಒಂದೇ ಶಬ್ಧ ಕಿವಿಗೆ ಬೀಳುತ್ತಿದ್ದರೂ ಅದು ತಲೆನೋವಿಗೆ ಕಾರಣವಾಗುತ್ತದೆ. ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡುವುದು ಕೂಡ ತಲೆನೋವಿಗೆ ಮೂಲವಾಗುತ್ತದೆ.

ಒಂದೇ ವಿಷ್ಯದ ಬಗ್ಗೆ ತುಂಬಾ ಸಮಯಗಳ ಕಾಲ ಆಲೋಚನೆ ಮಾಡ್ತಿದ್ದರೆ ತಲೆನೋವು ಕಾಣಿಸಿಕೊಳ್ಳುತ್ತದೆ. ಮೆದುಳಿಗೆ ಒತ್ತಡ ಬೀಳುವುದ್ರಿಂದ ನಿಮಗೆ ನೋವಿನ ಅನುಭವವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read