ವಿಶ್ವದ ಪ್ರಬಲ ಕರೆನ್ಸಿ ಯಾವುದು ಗೊತ್ತಾ ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಕರೆನ್ಸಿ ಪ್ರತಿ ದೇಶದ ಆರ್ಥಿಕತೆಗೆ ಕನ್ನಡಿ ಹಿಡಿಯುತ್ತದೆ. ಕರೆನ್ಸಿಯ ಸಾಮರ್ಥ್ಯವು ಆ ದೇಶದ ಆರ್ಥಿಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ವಿಶ್ವಸಂಸ್ಥೆಯು ಒಟ್ಟು 180 ದೇಶಗಳ ಕರೆನ್ಸಿಗಳನ್ನು ಗುರುತಿಸಿದೆ. ವಿಶ್ವದ ಪ್ರಬಲ ಕರೆನ್ಸಿ ಯಾವುದು ಅನ್ನೋದು ಇಂಟ್ರೆಸ್ಟಿಂಗ್‌ ಸಂಗತಿ. ವಿಶ್ವದ 10 ಪ್ರಬಲ ಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳೋಣ.

ಫೋರ್ಬ್ಸ್ ಪ್ರಕಟಿಸಿರೋ ಟಾಪ್‌ 10 ಪಟ್ಟಿ ಇದು. ಅತ್ಯಂತ ಪ್ರಬಲ ಕರೆನ್ಸಿ ಡಾಲರ್‌ ಅಲ್ಲ. ಭಾರತೀಯ ರೂಪಾಯಿಯ ಶ್ರೇಯಾಂಕ ಎಷ್ಟನೇ ಸ್ಥಾನದಲ್ಲಿದೆ ಅನ್ನೋದು ಇಂಟ್ರೆಸ್ಟಿಂಗ್‌ ಸಂಗತಿ.

ಕುವೈತ್‌ನ ದಿನಾರ್ ವಿಶ್ವದ ಪ್ರಬಲ ಕರೆನ್ಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒಂದು ಕುವೈತ್ ದಿನಾರ್ ಮೌಲ್ಯವು 3.25 ಡಾಲರ್ ಮತ್ತು 270.05 ರೂಪಾಯಿಗಳಿಗೆ ಸಮಾನವಾಗಿದೆ. ಈ ಪಟ್ಟಿಯಲ್ಲಿ ಬಹ್ರೇನ್ ದಿನಾರ್ ಎರಡನೇ ಸ್ಥಾನದಲ್ಲಿದೆ, ಇದರ ಮೌಲ್ಯವು 2.65 ಡಾಲರ್ ಮತ್ತು 220.53 ರೂಪಾಯಿಗಳಿಗೆ ಸಮಾನವಾಗಿದೆ.

ಒಮಾನಿ ರಿಯಾಲ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಒಂದು ರಿಯಾಲ್‌ನ ಮೌಲ್ಯ 2.60 ಡಾಲರ್ ಮತ್ತು 215.92 ರೂಪಾಯಿಗಳಿಗೆ ಸಮಾನವಾಗಿದೆ. ಜೋರ್ಡಾನ್ ದಿನಾರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಇದರ ಬೆಲೆ 1.41 ಯುಎಸ್ ಡಾಲರ್. ಅಂದರೆ 117.17 ರೂಪಾಯಿಗಳಿಗೆ ಸಮಾನವಾಗಿದೆ.

ಜಿಬ್ರಾಲ್ಟರ್ ಪೌಂಡ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ, ಇದರ ಮೌಲ್ಯ 1.27 ಡಾಲರ್ ಮತ್ತು 105.52 ರೂಪಾಯಿಗಳಿಗೆ ಸಮಾನವಾಗಿದೆ. ಒಂದು ಬ್ರಿಟಿಷ್ ಪೌಂಡ್‌ನ ಮೌಲ್ಯವು 1.27 ಡಾಲರ್ ಮತ್ತು 105.54 ರೂಪಾಯಿಗಳಿಗೆ ಸಮಾನ.

7ನೇ ಸ್ಥಾನದಲ್ಲಿ ಕೇಮನ್ ಐಲ್ಯಾಂಡ್ಸ್ ಡಾಲರ್ ಇದೆ. ಇದರ ಮೌಲ್ಯ 1.20 ಡಾಲರ್, ಭಾರತೀಯ ಕರೆನ್ಸಿಯಲ್ಲಿ 99.76 ರೂಪಾಯಿ. ಸ್ವಿಸ್ ಫ್ರಾಂಕ್ ಇದು ಸ್ವಿಡ್ಜರ್ಲೆಂಡ್‌ನ ಕರೆನ್ಸಿ. ಈ ಪಟ್ಟಿಯಲ್ಲಿ ಸ್ವಿಸ್‌ ಫ್ರಾಂಕ್‌ 8ನೇ ಸ್ಥಾನದಲ್ಲಿದೆ. ಒಂದು ಸ್ವಿಸ್ ಫ್ರಾಂಕ್ ಮೌಲ್ಯ 1.15 ಡಾಲರ್ ಮತ್ತು 95.72 ರೂಪಾಯಿಗಳಿಗೆ ಸಮ.

ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಯುರೋ ಇದೆ, ಇದರ ಬೆಲೆ 1.09 ಡಾಲರ್ ಮತ್ತು 90.40 ಭಾರತೀಯ ರೂಪಾಯಿಗಳಿಗೆ ಸಮಾನವಾಗಿದೆ. ಅಮೆರಿಕನ್‌ ಡಾಲರ್ ಹೆಸರು ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ, ಇದು ಪ್ರಸ್ತುತ 83.13 ರೂಪಾಯಿಗೆ ಸಮಾನವಾಗಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ವೆಬ್‌ಸೈಟ್ ಪ್ರಕಾರ, ಭಾರತೀಯ ಕರೆನ್ಸಿ ವಿಶ್ವದ 15ನೇ ಪ್ರಬಲ ಕರೆನ್ಸಿಯಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read