ಸದಾ ಆಕರ್ಷಕ ತ್ವಚೆ ಪಡೆಯಲು ಏನ್ಮಾಡ್ಬೇಕು ಗೊತ್ತಾ…..?

ವರ್ಷ 30 ಆಗ್ತಾ ಇದ್ದಂತೆ ಮುಖದ ಲಕ್ಷಣ ಬದಲಾಗಲು ಶುರುವಾಗುತ್ತದೆ. ವಯಸ್ಸು ಹೆಚ್ಚಾಗ್ತಾ ಇದ್ದಂತೆ ಸುಕ್ಕುಗಳು ಕಾಣಿಸುತ್ತವೆ. ಸದಾ ಯಂಗ್ ಆಗಿ ಕಾಣಬೇಕೆಂಬ ಕನಸು ಕಾಣುವ ಮಹಿಳೆಯರು ಇದ್ರಿಂದ ನಿರಾಶೆಗೊಳ್ತಾರೆ. ಮುಖದ ಮೇಲೆ ಕಾಣಿಸುತ್ತಿರುವ ಸುಕ್ಕನ್ನು ಮುಚ್ಚಿಡಲು ನಾನಾ ಪ್ರಯತ್ನ ಮಾಡ್ತಾರೆ. ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ.

ಆಕರ್ಷಕ ಚರ್ಮ ಇನ್ನು ಅಸಾಧ್ಯ ಎಂದು ಚಿಂತೆ ಮಾಡಬೇಕಾಗಿಲ್ಲ. ರಾತ್ರಿ ಮಲಗುವ ಮೊದಲು ನೀವು ಕೆಲವೊಂದು ನಿಯಮಗಳನ್ನು ನಿಯಮಿತವಾಗಿ ಪಾಲಿಸಿದ್ರೆ ಯುವತಿಯರನ್ನೂ ನಾಚಿಸುವ ಸೌಂದರ್ಯ ನಿಮ್ಮದಾಗುವುದರಲ್ಲಿ ಎರಡು ಮಾತಿಲ್ಲ.

ರಾತ್ರಿ ಮಲಗುವ ಮೊದಲು ನಿಮ್ಮ ಚರ್ಮಕ್ಕೆ ಅನುಗುಣವಾಗಿ ಕ್ಲೆನ್ಸರ್ ಬಳಸಿ ಮುಖವನ್ನು ಸ್ವಚ್ಛಗೊಳಿಸಿ. ಮುಖದ ಮೇಲೆ ಯಾವುದೇ ಧೂಳು, ಮಣ್ಣು ಇರದಂತೆ ಸ್ವಚ್ಛವಾಗಿ ತೊಳೆಯಿರಿ. ಇದ್ರಿಂದ ಮುಖದ ಚರ್ಮ ಸ್ವಚ್ಛವಾಗುವುದಲ್ಲದೆ ಮೊಡವೆ ಕಾಣಿಸಿಕೊಳ್ಳುವುದಿಲ್ಲ.

ಮುಖ ತೊಳೆದ ನಂತ್ರ ಚರ್ಮವನ್ನು ಟೋನ್ ಮಾಡಿ. ಒಣ ಚರ್ಮಕ್ಕೆ ಬೇರೆ ಹಾಗೂ ಆಯಿಲ್ ಚರ್ಮಕ್ಕೆ ಬೇರೆ ಎಣ್ಣೆ ಬಳಸಬೇಕು.

ಕಣ್ಣುಗಳ ಕೆಳ  ಭಾಗ ಬಹಳ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಕ್ರೀಂ ಬಳಸಿ ನಿಧಾನವಾಗಿ ಮಸಾಜ್ ಮಾಡಿ. ಇದ್ರಿಂದ ಕಪ್ಪು ಕಲೆ ಮಾಯವಾಗುತ್ತದೆ.

ಪ್ರತಿಯೊಂದು ಚರ್ಮಕ್ಕೂ ಮಾಯಶ್ಚರೈಸರ್ ಅವಶ್ಯಕತೆ ಇರುತ್ತದೆ. ವಯಸ್ಸಾಗ್ತಾ ಇದ್ದಂತೆ ಚರ್ಮ ಮತ್ತಷ್ಟು ಕಳೆಗುಂದುತ್ತದೆ. ಒಣಗಲು ಶುರುವಾಗುತ್ತದೆ. ಇದಕ್ಕೆ ಮಾಯಶ್ಚರೈಸರ್ ಬಳಸಬೇಕಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read