Kodi Mutt Swamiji : ‘ಸಿಎಂ ಸಿದ್ದರಾಮಯ್ಯ’ ಅಧಿಕಾರಾವಧಿ ಬಗ್ಗೆ ಕೋಡಿಮಠದ ಶ್ರೀ ನುಡಿದ ಭವಿಷ್ಯವೇನು ಗೊತ್ತೇ..?

ಹಾಸನ : ರಾಜ್ಯದಲ್ಲಿ ಮುಂದೆ ಸಂಭವಿಸಬಹುದಾದ ಅನಾಹುತ, ರಾಜಕೀಯ ಬೆಳವಣಿಗೆ, ಪ್ರಕೃತಿ ವಿಕೋಪಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳು ಇದೀಗ ಸಿಎಂ ಸಿದ್ದರಾಮಯ್ಯ ಅಧಿಕಾರಾವಧಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ಶಿವಾನಂದ ಯೋಗಿ ರಾಜೇಂದ್ರ ಸ್ವಾಮೀಜಿ ಸುದ್ದಿಗಾರರ ಜೊತೆ ಮಾತನಾಡಿದರು. ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ತೊಂದರೆ ಇಲ್ಲ, ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರೆಯುತ್ತಾರಾ ಎನ್ನುವ ಬಗ್ಗೆ ತೀರ್ಮಾನ ಆಗಲಿದೆ ಎಂದರು. ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾದರೂ ಆಗಬಹುದು ಎಂಬ ಸುಳಿವು ನೀಡಿದ್ದಾರೆ.

ಕೇಂದ್ರದಲ್ಲಿ ಯಾವ ಪಕ್ಷ ಬರಲಿದೆ ಎಂಬುದನ್ನು ಚುನಾವಣೆ ಸಮೀಪ ಬಂದಾಗ ಹೇಳುತ್ತೇನೆ ಎಂದರು. ಅದೇ ರೀತಿ ಸದ್ಯದಲ್ಲೇ ಮಳೆ ಬರಲಿದೆ. ಅನ್ನಕ್ಕೆ ತೊಂದರೆಯಾಗದು ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದಾರೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ಗೊತ್ತಾಗಲಿದೆ. ಶ್ರಾವಣದ ಮಧ್ಯಭಾಗದ ನಂತರ ಕಾರ್ತಿಕದವರೆಗೂ ಮಳೆಯಾಗಲಿದೆ ಎಂದು ಭವಿಷ್ಯ ನುಡಿದರು.

ನಿಖರ ಭವಿಷ್ಯಕ್ಕೆ ಪ್ರಸಿದ್ಧರಾಗಿರುವ ಕೋಡಿಮಠ ಮಹಾಸಂಸ್ಥಾನ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮುಂಬರುವ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಇತ್ತೀಚೆಗಷ್ಟೇ ಅಚ್ಚರಿಯ ಹೇಳಿಕೆ ನೀಡಿದ್ದರು.

ಲೋಕಸಭಾ ಚುನಾವಣೆ ಇನ್ನೂ ಬಹಳ ದೂರವಿದೆ. ಒಂದೊಮ್ಮೆ ಈ ಚುನಾವಣೆ ವಿಚಾರವಾಗಿ ನಾನು ಸತ್ಯ ಹೇಳಿದರೆ, ಮಠ ಸೇರುವುದಿಲ್ಲ. ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅಸತ್ಯವೇ ಎಲ್ಲರಿಗೂ ಪ್ರಿಯ ಎಂದು ಹೇಳಿದ್ದಾರೆ.ಲೋಕಸಭಾ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದ ಅವರು, ಈಗಲೇ ಸತ್ಯ ಹೇಳಿದರೆ ನಾನು ಮಠ ತಲುಪಲು ಸಾಧ್ಯವಾಗುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದರು.. ಸ್ವಾಮೀಜಿಯವರ ಈ ಹೇಳಿಕೆ ಈಗ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿತ್ತು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read