ಹಾಲಿಗೆ ಪರ್ಯಾಯ ಆಹಾರ ಯಾವುದು ಗೊತ್ತಾ….?

ನೇರವಾಗಿ ಹಾಲು ಕುಡಿಯುವುದರಿಂದ ಅಲರ್ಜಿಯಾಗುತ್ತದೆ ಎನ್ನುವವರು ಈ ಕೆಳಗಿನ ಪರ್ಯಾಯಗಳ ಮೂಲಕ ಹಾಲಿನ ಪ್ರೊಟೀನ್ ಗಳನ್ನು ಪಡೆದುಕೊಳ್ಳಬಹುದು.

ಸೋಯಾ ಹಾಲಿನಲ್ಲಿ ಪ್ರೊಟೀನ್, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳು ಸಾಕಷ್ಟಿವೆ. ಇವುಗಳನ್ನು ಮಿತವಾಗಿ ಕುಡಿಯುವುದರಿಂದ ಹೆಚ್ಚಿನ ಲಾಭಗಳನ್ನು ಪಡೆಯಬಹುದು.

ಬಾದಾಮಿ ಹಾಲಿನಲ್ಲಿ ವಿಟಮಿನ್ ಇ, ಪ್ರೊಟೀನ್ ಮತ್ತು ಫೈಬರ್ ಗಳು ಸಾಕಷ್ಟಿದ್ದು ತೂಕ ಕಡಿಮೆ ಮಾಡಿಕೊಳ್ಳಲೂ ಇದು ಸಹಕಾರಿ ಎನ್ನಲಾಗುತ್ತದೆ.

ತೆಂಗಿನಕಾಯಿ ಒಡೆಯುವಾಗ ಸಿಗುವ ನೀರು ಮತ್ತು ತೆಂಗಿನ ತುರಿಯಿಂದ ಹೊರತೆಗೆದ ಹಾಲು ಎರಡು ಕೂಡಾ ಪೋಷಕಾಂಶಗಳಿಂದ ಸಮೃದ್ಧಿಯಾಗಿವೆ. ಇದು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ ಎಂಬ ಕಾರಣ ಬಿಟ್ಟರೆ ಉಳಿದೆಲ್ಲಾ ದೃಷ್ಟಿಯಿಂದ ಅತ್ಯುತ್ತಮ ಪಾನೀಯವಾಗಿದೆ.

ಗೋಡಂಬಿ ಬೀಜ, ಬೆಣ್ಣೆ ಮತ್ತು ನೀರನ್ನು ಬೆರೆಸಿ ಗೋಡಂಬಿ ಹಾಲನ್ನು ತಯಾರಿಸಲಾಗುತ್ತದೆ. ಮಧುಮೇಹಿಗಳು ಇದನ್ನು ಕುಡಿಯುವುದು ಬಹಳ ಒಳ್ಳೆಯದು.  ಹಾಲಿಗೆ ಪರ್ಯಾಯವಾಗಿ ಇದನ್ನು ಕುಡಿಯಬಹುದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read