ಬೇಸಿಗೆಯಲ್ಲಿ ನಿರ್ವಸ್ತ್ರವಾಗಿ ಮಲಗಿದ್ರೆ ಏನಾಗುತ್ತೆ ಗೊತ್ತಾ…..?

ರಾತ್ರಿ ಬಟ್ಟೆ ಇಲ್ಲದೆ ಮಲಗಬೇಕಾ, ಬೇಡ್ವಾ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ರಾತ್ರಿ ನಿರ್ವಸ್ತ್ರವಾಗಿ ಮಲಗುವುದ್ರಿಂದ ಸಾಕಷ್ಟು ಲಾಭವಿದೆ. ಆದ್ರೆ ಬೇಸಿಗೆಯಲ್ಲಿ ಬೆತ್ತಲೆ ಮಲಗುವುದ್ರಿಂದ ಹಾನಿಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಬಟ್ಟೆಯಿಲ್ಲದೆ ಮಲಗುವುದ್ರಿಂದ ನಿದ್ರೆಯ ಗುಣಮಟ್ಟ ಹದಗೆಡುತ್ತದೆ ಎಂದು ಬುಪಾದ ಕ್ರೋಮ್‌ವೆಲ್ ಆಸ್ಪತ್ರೆಯ ಲೀಡ್ ಸ್ಲೀಪ್ ಫಿಸಿಯಾಲಜಿಸ್ಟ್ ಜೂಲಿಯಸ್ ಪ್ಯಾಟ್ರಿಕ್ ಹೇಳಿದ್ದಾರೆ. ಬಟ್ಟೆಯಿಲ್ಲದೆ ಮಲಗಿದಾಗ ಬೆವರು ನಿಮ್ಮ ದೇಹದ ಮೇಲಿರುತ್ತದೆ. ಅದು ಅಲ್ಲಿಯೇ ಉಳಿಯುವುದ್ರಿಂದ ತೊಂದರೆಯಾಗುತ್ತದೆ. ನಿದ್ರೆ ಸರಿಯಾಗಿ ಬರುವುದಿಲ್ಲ.

ನಿದ್ರೆ ಕಡಿಮೆಯಾದ್ರೆ ಅದು ನಿಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿದ್ರೆ ಕೊರತೆಯಿಂದ ಮೆದುಳಿಗೆ ವಿಶ್ರಾಂತಿ ಸಿಗುವುದಿಲ್ಲ. ಒತ್ತಡ, ಮಾನಸಿಕ ಸಮಸ್ಯೆ ಕಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಈ ಹಿಂದೆ ನರವಿಜ್ಞಾನಿ ಡಾ. ಗೈ ಲೆಶ್‌ಜಿನರ್ ಕೂಡ ರಾತ್ರಿ ಬಟ್ಟೆಯಿಲ್ಲದೆ ಹಾಸಿಗೆಯಲ್ಲಿ ಮಲಗಿದ್ರೆ ಹೆಚ್ಚು ಸೆಕೆಯಾಗುತ್ತದೆ ಎಂದಿದ್ದರು. ಬಟ್ಟೆಯಿಲ್ಲದೆ ಮಲಗುವ ಬದಲು ಬಟ್ಟೆ ಧರಿಸಿ ಮಲಗುವುದು ಉತ್ತಮವೆಂದು ಅವರು ಹೇಳಿದ್ದರು. ಬೇಸಿಗೆಯಲ್ಲಿ ಹತ್ತಿ ಬಟ್ಟೆ ಧರಿಸಿ ನಿದ್ರೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ದೇಹದ ಮೇಲೆ ಬೆವರು ಉಳಿಯುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read