ಈ ಪದಾರ್ಥಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತಾ…..?

ಆಯುರ್ವೇದದಲ್ಲಿ ಬಳಸುವ ಗಿಡಮೂಲಿಕೆಗಳು ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಅವು ಹಲವು ರೋಗಗಳ ವಿರುದ್ಧ ಹೋರಾಡಿ ನಮ್ಮ ಆರೋಗ್ಯವನ್ನು ಕಾಪಾಡುತ್ತವೆ. ಆದರೆ ಅವುಗಳನ್ನು ಅತಿಯಾಗಿ ಬಳಸುವುದರಿಂದ ಕೆಲವು ಅಡ್ಡಪರಿಣಾಮ ಬರುಬಹುದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳಿ.

-ಅಶ್ವಗಂಧ : ಇದನ್ನು ಅತಿಯಾಗಿ ಸೇವಿಸಿದರೆ ತೂಕ ಹೆಚ್ಚಾಗುತ್ತದೆ.

-ಕರಿಮೆಣಸು : ಇದು ಶೀತ ಕಫ ಆಗದಂತೆ ತಡೆಯುತ್ತದೆ ನಿಜ. ಆದರೆ ಇದನ್ನು ಹೆಚ್ಚಾಗಿ ತಿಂದರೆ ಹೈಪರ್ ಆಮ್ಲೀಯತೆ ಮತ್ತು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.

-ದಾಲ್ಚಿನ್ನಿ: ಇದು ಅಡುಗೆಯಲ್ಲಿ ರುಚಿ ಮತ್ತು ಪರಿಮಳ ಹೆಚ್ಚಿಸಲು ಬಳಸಲಾಗುತ್ತದೆ. ಇದು ಬಾಯಿ ಹುಣ್ಣು ಮತ್ತು ಎದೆಯ ಕಿರಿಕಿರಿಯನ್ನು ಉಂಟುಮಾಡುತ್ತದೆ.

-ತ್ರಿಫಲ : ಕಣ್ಣಿನ ಮತ್ತು ಹೊಟ್ಟೆಯ ಸಮಸ್ಯೆಗೆ ತ್ರಿಫಲವನ್ನು ಸೇವಿಸಲಾಗುತ್ತದೆ. ಆದರೆ ಇದು ಕರುಳಿನ ನೈಸರ್ಗಿಕ ಪ್ರಕ್ರಿಯೆಯನ್ನು ಹಾನಿಗೊಳಿಸುತ್ತದೆ.

-ಶುಂಠಿ : ಇದನ್ನು ಅತೀಯಾಗಿ ಸೇವಿಸಿದರೆ ಹೊಟ್ಟೆಯ ಸಮಸ್ಯೆ ಮತ್ತು ಹೊಟ್ಟೆಯ ಕಿರಿಕಿರಿಯನ್ನುಂಟು ಮಾಡುತ್ತದೆ.

-ಅರಿಶಿನ : ಇದನ್ನು ಅತಿಯಾಗಿ ಸೇವಿಸಿದರೆ ಅತಿಯಾದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read