ನಿಮಗೆ ತಿಳಿದಿದೆಯಾ ʼತುಳಸಿʼಯ ಆರೋಗ್ಯ ಮಹತ್ವ

ತುಳಸಿ ಆರಾಧನೀಯವಾಗಿ ಮಾತ್ರವಲ್ಲ, ಆರೋಗ್ಯಕ್ಕೂ ಬಹೂಪಕಾರಿ. ತುಳಸಿ ನೀರನ್ನು ಸೇವಿಸುವ ಮೂಲಕ ನಾವು ಹಲವಾರು ರೋಗಗಳಿಂದ ದೂರವಿರಬಹುದು.

ಬೆಳಿಗ್ಗೆ ಎದ್ದಾಕ್ಷಣ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ಗಂಧ ಇಲ್ಲವಾಗುತ್ತದೆ. ತುಳಸಿ ನೀರು ಸೇವನೆಯಿಂದ ಶೀತ, ಕೆಮ್ಮು, ಕಫಗಳಿಂದ ದೂರವಿರಬಹುದು. ಗಂಟಲು ನೋವನ್ನು ಇದು ಕಡಿಮೆ ಮಾಡುತ್ತದೆ.

ಜ್ವರ ಬಂದಾಗ ತುಳಸಿ ಜೊತೆ ಪುದೀನ ರಸ ಸೇರಿಸಿ ಕುಡಿಯುವುದು ಉತ್ತಮ. ದೇಹದ ಕಲ್ಮಶಗಳನ್ನು ಶುದ್ಧೀಕರಿಸಲು ತುಳಸಿ ನೀರು ಬಳಕೆ ಹೆಚ್ಚು ಸೂಕ್ತ. ಬಿಸಿ ನೀರಿಗೆ ೬ ಎಲೆ ತುಳಸಿ ಹಾಕಿಟ್ಟು ಇಡೀ ದಿನ ಕುಡಿಯುತ್ತಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read