ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ.

ಹೊಕ್ಕಳಿಗೆ ಎಣ್ಣೆ ಹಾಕುವುದ್ರಿಂದ ಬಿರುಕು ಬಿಟ್ಟ ತುಟಿಗಳು ಮೃದು ಮತ್ತು ಗುಲಾಬಿ ಬಣ್ಣ ಪಡೆಯುತ್ತವೆ.

ಇದು ಕಣ್ಣಿನ ಉರಿ, ತುರಿಕೆ ಮತ್ತು ಶುಷ್ಕತೆಯನ್ನು ಕಡಿಮೆ ಮಾಡುತ್ತದೆ.

ಹೊಕ್ಕುಳಿಗೆ ಎಣ್ಣೆ ಹಚ್ಚುವುದರಿಂದ ದೇಹದ ಯಾವುದೇ ಭಾಗದಲ್ಲಿ ಊತದ ಸಮಸ್ಯೆ ಕಡಿಮೆಯಾಗುತ್ತದೆ.

ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಾಕಿದ್ರೆ ಮೊಣಕಾಲು ನೋವು ಕಡಿಮೆಯಾಗುತ್ತದೆ.

ಸಾಸಿವೆ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚಿದ್ರೆ ಮುಖ ಕಾಂತಿ ಪಡೆಯುತ್ತದೆ. ಚರ್ಮದ ಕಲೆ ಕೂಡ ಕಡಿಮೆಯಾಗುತ್ತದೆ. ಇದ್ರಿಂದ ಜೀರ್ಣಾಂಗ ವ್ಯವಸ್ಥೆ ಬಲಪಡೆಯುತ್ತದೆ.

ಬಾದಾಮಿ ಎಣ್ಣೆಯನ್ನು ಹೊಕ್ಕುಳಿಗೆ ಹಾಕಿದ್ರೆ ಚರ್ಮ ಕಾಂತಿ ಪಡೆಯುತ್ತದೆ.

ಹೊಕ್ಕುಳಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ.

ಇದು ಅಜೀರ್ಣ, ಆಹಾರ ವಿಷ, ಅತಿಸಾರ, ವಾಕರಿಕೆ ಮುಂತಾದ ಕಾಯಿಲೆಗಳಿಗೂ ಪರಿಹಾರ ನೀಡುತ್ತದೆ.

ಬೇವಿನ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚಿದ್ರೆ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ

ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿದ್ರೆ ಮಹಿಳೆಯರ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಾಗುತ್ತವೆ.

ಹೊಕ್ಕುಳಿಗೆ ಎಣ್ಣೆಯನ್ನು ಹಚ್ಚುವ ಮೂಲಕ ಪುರುಷರ ವೀರ್ಯ ಬೆಳವಣಿಗೆ ಹೆಚ್ಚಿಸಬಹುದು.

ಮುಟ್ಟಿನ ವೇಳೆ ಹೊಟ್ಟೆ ನೋವಿನಿಂದ ಬಳಲುವವರು ಹತ್ತಿ ಸಹಾಯದಿಂದ ಸ್ವಲ್ಪ ಬ್ರಾಂಡಿಯನ್ನು ಹೊಕ್ಕುಳಿಗೆ ಹಚ್ಚಿದ್ರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read