ನಿಮಗೆ ಗೊತ್ತಾ ಗುಲಾಬಿಯಲ್ಲಿರುವ ಅದ್ಭುತ ಗುಣಗಳು

ಗುಲಾಬಿ ಎಂದರೆ ಯಾರಿಗೆ ಇಷ್ಟವಿಲ್ಲ. ನೋಡಲು ಸುಂದರವಾಗಿರುವ ವಿವಿಧ ಬಣ್ಣಗಳ ಗುಲಾಬಿ ಎಲ್ಲರಿಗೂ ಇಷ್ಟ. ಗುಲಾಬಿಯನ್ನು ನೋಡಿದರೆ ಮನಸ್ಸು ಅರಳುತ್ತದೆ. ಸೌಂದರ್ಯದ ಸೂಚಕವಾಗಿ ನಿಲ್ಲುತ್ತದೆ.

ಆದರೆ ಅದರ ಹೊರತಾಗಿಯೂ ಗುಲಾಬಿ ಅಂದರೆ ಆರೋಗ್ಯದ ಸಂಕೇತವೂ ಹೌದು. ಹಲವಾರು ಕಾಯಿಲೆಗಳನ್ನು ನಿವಾರಿಸುವ ಶಕ್ತಿ ಗುಲಾಬಿಗಿದೆ.

1. ಒಣಗಿದ ತುಟಿ ಮತ್ತು ಚರ್ಮಕ್ಕೆ ಗುಲಾಬಿ ನೀರಿನ ಜೊತೆ ನಿಂಬೆ ರಸ ಮತ್ತು ಗ್ಲಿಸರಿನ್ ಸೇರಿಸಿ ತುಟಿಗಳಿಗೆ ಮತ್ತು ಚರ್ಮಕ್ಕೆ ಲೇಪಿಸಿದರೆ ತುಟಿ ಮತ್ತು ಚರ್ಮ ಮೃದುವಾಗುತ್ತದೆ.

2. ಗುಲಾಬಿಯಿಂದ ತಯಾರಿಸಿದ ಗುಲ್ಕನ್ ಸೇವಿಸಿದರೆ ಬಾಯಿ ಹುಣ್ಣು, ಎದೆ ಉರಿ ಮತ್ತು ಮೂಗಿನ ರಕ್ತಸ್ರಾವ ಕಡಿಮೆಯಾಗುತ್ತದೆ.

3. ಬಿಸಿಲಿನಿಂದ ಕಪ್ಪಾದ ಚರ್ಮಕ್ಕೆ 2 ಚಮಚ ಗುಲಾಬಿ ನೀರು, ಎರಡು ಚಮಚ ಟೊಮೆಟೊ ರಸವನ್ನು ಸೇರಿಸಿ ಲೇಪಿಸಿದರೆ ಕಪ್ಪು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

4. ಗುಲಾಬಿ ನೀರಿನೊಂದಿಗೆ ಗಂಧವನ್ನು ಸೇರಿಸಿ ಕಣ್ಣಿನ ಸುತ್ತಲೂ ಲೇಪಿಸಿದರೆ ಕಣ್ಣುಗಳ ಸುಕ್ಕು ಕಡಿಮೆಯಾಗುತ್ತದೆ.

5. ಗುಲಾಬಿ ಹೂವಿನ ಕಷಾಯವನ್ನು ನಿಯಮಿತವಾಗಿ ಸೇವಿಸಿದರೆ ಕರುಳಿನ ಸೋಂಕು ನಿವಾರಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read