ಹುಡುಗಿಯರನ್ನು ಇಂಪ್ರೆಸ್ ಮಾಡೋದೇಗೆ ಗೊತ್ತಾ….?

ಹುಡುಗಿಯರನ್ನು ಬುಟ್ಟಿಗೆ ಬೀಳಿಸಿಕೊಳ್ಳೋದು ಸುಲಭವಲ್ಲ. ಅವರನ್ನು ಇಂಪ್ರೆಸ್ ಮಾಡಬೇಕೆಂದ್ರೆ ಮೊದಲು ಅವರ ಸ್ವಭಾವ ತಿಳಿದುಕೊಳ್ಳಬೇಕು. ಹುಡುಗಿಯರಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬ ಸಾಮಾನ್ಯ ಜ್ಞಾನ ನಿಮಗಿರಬೇಕು.

ಯಾರು ಜಾಸ್ತಿ ಸಂತೋಷ ಕೊಡ್ತಾರೋ ಅವರ ಜೊತೆ ಜಾಸ್ತಿ ಸಮಯ ಕಳೆಯಲು ಹುಡುಗಿಯರು ಇಷ್ಟ ಪಡ್ತಾರೆ. ಅವರನ್ನು ಖುಷಿಯಾಗಿಟ್ಟುಕೊಂಡ್ರೆ ಅವರು ನಿಮಗೆ ಮತ್ತಷ್ಟು ಹತ್ತಿರವಾಗ್ತಾರೆ.

ಹುಡುಗಿಯರಿಗೆ ಹುಡುಗರು ಸುಳ್ಳು ಹೇಳುವುದು ಇಷ್ಟವಾಗುವುದಿಲ್ಲ. ಸತ್ಯ ಹೇಳುವ ಹುಡುಗರನ್ನು ಜಾಸ್ತಿ ನಂಬ್ತಾರೆ ಹುಡುಗಿಯರು. ಹುಡುಗಿಯರು ಹತ್ತಿರವಾಗಬೇಕೆಂದ್ರೆ ನೀವು ಆದಷ್ಟು ಸತ್ಯ ಹೇಳಿ.

ಹುಡುಗಿಯರನ್ನು ಭೇಟಿಯಾಗುವ ವೇಳೆ ನಿಮ್ಮ ಬಟ್ಟೆ ಬಗ್ಗೆ ಗಮನ ಇರಲಿ. ಸ್ವಚ್ಛ ಹಾಗೂ ಉತ್ತಮ ಬಟ್ಟೆ ಧರಿಸಿದ ಹುಡುಗನಿಗೆ ಇಂಪ್ರೆಸ್ ಆಗ್ತಾರೆ ಹುಡುಗಿಯರು.

ಹುಡುಗಿಯರು ಸಣ್ಣ ಸಣ್ಣ ವಿಷಯಕ್ಕೆ ಬೇಸರಗೊಳ್ತಾರೆ. ಸಣ್ಣ ಸಣ್ಣ ವಿಷಯಕ್ಕೆ ಖುಷಿಯಾಗ್ತಾರೆ. ಅವರ ನೋವಿಗೆ ಕಾರಣ ಕೇಳಿ. ಅವರನ್ನು ಸಂತೈಸಿ, ಧೈರ್ಯ ಹೇಳಿ. ಅವರ ಮಾತು ಕೇಳುವ ಹುಡುಗರು, ಹುಡುಗಿಯರಿಗೆ ಇಷ್ಟವಾಗ್ತಾರೆ.

ಹುಡುಗಿಯರಿಗೆ ಉಡುಗೊರೆಯೆಂದ್ರೆ ಬಹಳ ಇಷ್ಟ. ಆಗಾಗ ಏನಾದ್ರೂ ಗಿಫ್ಟ್ ನೀಡ್ತಾ ಇರಿ. ನೀವು ಕೊಟ್ಟ ಗಿಫ್ಟ್ ನ ಬೆಲೆ ಬಗ್ಗೆ ಹುಡುಗಿಯರು ತಲೆಕೆಡಿಸಿಕೊಳ್ಳುವುದಿಲ್ಲ.

ಹುಡುಗಿಯರಿಗೂ ಹೊಗಳಿಕೆಗೂ ನಂಟು. ಹುಡುಗಿಯರು ಎಲ್ಲರ ಎದುರು ಹೊಗಳುವುದನ್ನು ಇಷ್ಟ ಪಡ್ತಾರೆ ನೆನಪಿರಲಿ.

ನಿಮ್ಮಿಂದ ಅವರಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳಿ. ಸಾಮಾನ್ಯವಾಗಿ ಹುಡುಗಿಯರು ಅವರ ಬಾಯ್ ಫ್ರೆಂಡ್ ಮೇಲೆ ಜಾಸ್ತಿ ನಂಬಿಕೆ ಇಟ್ಟಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read