ʼಆಹಾರʼವನ್ನು ಚೆನ್ನಾಗಿ ಅಗಿಯುವುದರ ಹಿಂದೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಆಹಾರವನ್ನು ಅಗಿಯುವ ಪ್ರಕ್ರಿಯೆಯಿಂದಲೇ ನಮ್ಮ ಜೀರ್ಣಶಕ್ತಿಯು ಆರಂಭವಾಗುತ್ತದೆ. ಆಹಾರವನ್ನು ಅಗಿಯುವ ಪ್ರಕ್ರಿಯೆಗೂ ತುಂಬಾನೇ ಮಹತ್ವವಿದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ತಿನ್ನುವ ಪ್ರಕ್ರಿಯೆ ನಿಧಾನವಾಗೋದು ಮಾತ್ರವಲ್ಲದೇ ಕಡಿಮೆ ಆಹಾರವನ್ನು ಸೇವನೆ ಮಾಡಲು ಸಾಧ್ಯವಾಗುತ್ತದೆ.

ವೇಗವಾಗಿ ತಿಂದಷ್ಟೂ ಹೆಚ್ಚೆಚ್ಚು ಆಹಾರವು ದೇಹವನ್ನು ಸೇರುತ್ತದೆ. ಹೀಗಾಗಿ ನಿಧಾನವಾಗಿ ಆಹಾರವನ್ನು ಜಗಿಯುವುದರಿಂದ ಕಡಿಮೆ ಆಹಾರವನ್ನು ಸೇವಿಸುತ್ತೀರಿ.

ವರದಿಗಳ ಪ್ರಕಾರ, ಬೇರೆ ಬೇರೆ ಸ್ಥಳಗಳಲ್ಲಿ 30 ಮಹಿಳೆಯರಿಗೆ ಆಹಾರವನ್ನು ಸೇವಿಸಲು ಹೇಳಲಾಗಿತ್ತು, ಇದರಲ್ಲಿ ಆಹಾರವನ್ನು ಹೆಚ್ಚೆಚ್ಚು ಅಗಿದು ತಿಂದವರು ಬೇಗನೇ ಆಹಾರ ಸೇವನೆ ಮಾಡಿದವರಿಗಿಂತ ಹೆಚ್ಚು ಹೊಟ್ಟೆ ತುಂಬಿದ ಭಾವನೆ ವ್ಯಕ್ತಪಡಿಸಿದ್ದರು.

ವರದಿಯೊಂದರ ಪ್ರಕಾರ, ಆಹಾರವನ್ನು ಹೆಚ್ಚಾಗಿ ಅಗಿದು ತಿನ್ನುವವರು ಊಟವಾದ ಬಳಿಕ ಮಿಠಾಯಿಗಳನ್ನು ಸೇವನೆ ಮಾಡಲು ಮನಸ್ಸು ಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಆಹಾರವನ್ನು ಜಗಿದಷ್ಟೂ ದೇಹಕ್ಕೆ ಪೋಷಕಾಂಶ ಹೆಚ್ಚೆಚ್ಚು ಸಿಗಲಿದೆ. ಇದು ಹಸಿವೆಯನ್ನು ಕಡಿಮೆ ಮಾಡುತ್ತದೆ ಅಲ್ಲದೇ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸತ್ವವನ್ನು ನೀಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read