ಸಕ್ಕರೆಗಿಂತ ‘ಬೆಲ್ಲ’ ಹೇಗೆ ಆರೋಗ್ಯಕ್ಕೆ ಬೆಸ್ಟ್‌ ಗೊತ್ತಾ….?

ಸಕ್ಕರೆಗಿಂತ ಬೆಲ್ಲವೇ ಆರೋಗ್ಯಕರ ಎಂಬುದು ಎಲ್ಲರಿಗೂ ಗೊತ್ತು. ಬೆಲ್ಲವು ಜೀರ್ಣಕ್ರಿಯೆಯನ್ನು ವೇಗವಾಗಿ ನಡೆಯುವಂತೆ ಮಾಡುತ್ತದೆ. ಅಷ್ಟೇ ಅಲ್ಲ, ಆಹಾರ ಚೆನ್ನಾಗಿ ಜೀರ್ಣವಾಗುವಂತೆಯೂ ನೋಡಿಕೊಳ್ಳುತ್ತದೆ.

* ಒಂದು ವೇಳೆ ಹೊಟ್ಟೆ ಬಿರಿಯುವಂತೆ ತಿಂದು ಬಿಟ್ಟಿದ್ದರೆ, ಅದು ಚೆನ್ನಾಗಿ ಜೀರ್ಣವಾಗಲಿ ಎಂದು ಸ್ವಲ್ಪ ಬೆಲ್ಲ ತಿನ್ನಲು ಹೇಳಲಾಗುತ್ತದೆ.

* ಬೆಲ್ಲ ಶ್ವಾಸಕೋಶಗಳ ಆರೋಗ್ಯವನ್ನು, ಜೀರ್ಣ ವ್ಯವಸ್ಥೆಯನ್ನು ಕಾಪಾಡುತ್ತದೆ. ಹಾಗಾಗಿ ಇದನ್ನು ಒಳ್ಳೆಯ ಕ್ಲೆನ್ಸರ್ ಎಂದು ವರ್ಣಿಸುತ್ತಾರೆ.

* ಸಕ್ಕರೆಗಿಂತ ಬೆಲ್ಲದಲ್ಲಿ ನಾರಿನಂಶ ಹೆಚ್ಚು. ಹಾಗಾಗಿ ಇದು ಮಲಬದ್ಧತೆ ಉಂಟಾಗದಂತೆ ಕಾಪಾಡುತ್ತದೆ. ಕ್ಲೆನ್ಸರ್ ಆಗಿ ಇದು ಪಿತ್ತಕೋಶವನ್ನು ಸಹ ಶುಭ್ರ ಮಾಡುತ್ತದೆ.

* ಬೆಲ್ಲದಲ್ಲಿ ಖನಿಜಗಳು, ಲವಣಗಳು ಹೆಚ್ಚಾಗಿವೆ. ಅದರಲ್ಲೂ ಕಬ್ಬಿಣದ ಅಂಶ ತುಂಬಾ ಹೆಚ್ಚಾಗಿದೆ. ಹಾಗಾಗಿ ಋತುಚಕ್ರದ ಸಮಸ್ಯೆಗಳಿಂದ ತೊಳಲಾಡುವ ಮಹಿಳೆಯರು ಬೆಲ್ಲದಿಂದ ಮಾಡಿದ ಕಡಲೆ ಮಿಠಾಯಿಯನ್ನು ತಿನ್ನಬಹುದು.

* ಮಹಿಳೆಯರಲ್ಲಿ ಋತುಚಕ್ರದ ಸಮಯದಲ್ಲಿ ಬರುವ ನೋವನ್ನು ಬೆಲ್ಲ ಕಡಿಮೆ ಮಾಡುತ್ತದೆ.

* ಬೆಲ್ಲ ದೇಹದಲ್ಲಿರುವ ಫ್ರೀ ರಾಡಿಕಲ್ಸ್ ಅನ್ನು ನಿವಾರಿಸುತ್ತದೆ. ಅದರಿಂದ ರೋಗನಿರೋಧಕ ಶಕ್ತಿ ಬೆಳೆಯುತ್ತದೆ.

* ಬೆಲ್ಲದಲ್ಲಿರುವ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ನಿಂದ ತಕ್ಷಣ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದ್ದರಿಂದ ಬೆಲ್ಲ ಶಕ್ತಿಯ ಆಗರವೆನ್ನಬಹುದು.

* ಡಯಾಬಿಟಿಸ್ ರೋಗಿಗಳಿಗೆ ಸಕ್ಕರೆಗಿಂತ ಬೆಲ್ಲವೇ ಒಳ್ಳೆಯದು ಎಂದು ಕೆಲವರು ಹೇಳಿದರೂ, ಇದರ ಕ್ಯಾಲರಿಫಿಕ್ ಬೆಲೆ ಹೆಚ್ಚಾಗಿರುತ್ತದೆ. ಹಾಗಾಗಿ ಡಯಾಬಿಟಿಸ್ ನಿಂದ ನರಳುತ್ತಿರುವವರು ಬೆಲ್ಲವನ್ನು ಹೆಚ್ಚಾಗಿ ಉಪಯೋಗಿಸುವುದು ಒಳ್ಳೆಯದಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read