ವಿಶ್ವಕಪ್‌ ಗೆದ್ದಿರುವ ‘ಟೀಮ್ ಇಂಡಿಯಾ’ ಗೆ 125 ಕೋಟಿ ರೂ. ಬಹುಮಾನ; BCCI ಹೇಗೆ ಹಂಚಿಕೆ ಮಾಡಲಿದೆ ಎಂಬುದರ ಕುರಿತು ಇಲ್ಲಿದೆ ವಿವರ

ಕೆರಿಬಿಯನ್ನರ ನೆಲದಲ್ಲಿ ಟಿ20 ವಿಶ್ವಕಪ್‌ ಗೆದ್ದಿರುವ ಟೀಂ ಇಂಡಿಯಾಕ್ಕೆ ಪ್ರಶಂಸೆ ಮತ್ತು ಹಣದ ಹೊಳೆಯೇ ಹರಿದುಬರ್ತಿದೆ. ವಿಶ್ವವಿಜೇತ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ನಗದು ಬಹುಮಾನವನ್ನು ಈಗಾಗ್ಲೇ ಘೋಷಿಸಿದೆ. ತಂಡದ ಎಲ್ಲಾ ಆಟಗಾರರು ಮತ್ತು ಕೋಚ್‌ ನಡುವೆ ಈ ಹಣ ಹೇಗೆ ಹಂಚಿಕೆಯಾಗುತ್ತದೆ ಎಂಬುದು ಇಂಟ್ರೆಸ್ಟಿಂಗ್‌ ಸಂಗತಿ.

ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ರೋಹಿತ್‌ ಶರ್ಮಾ ಸೇರಿದಂತೆ ಒಟ್ಟಾರೆ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಸಿಗಲಿದೆ. ಗುರುವಾರ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗಿದೆ. ಮೂಲಗಳ ಪ್ರಕಾರ ಉಳಿದ ತರಬೇತುದಾರರಿಗೆ ತಲಾ 2.5 ಕೋಟಿ ರೂಪಾಯಿ ನೀಡಲಾಗುತ್ತದೆ. ಇನ್ನುಳಿದ ಸಿಬ್ಬಂದಿಗೆ ತಲಾ 2 ಕೋಟಿ ರೂಪಾಯಿ ಸಿಗಲಿದೆ. ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿ ನೀಡಲಾಗುತ್ತದೆ.

ಯಾರ್ಯಾರಿಗೆ ಎಷ್ಟೆಷ್ಟು ನಗದು ಬಹುಮಾನ?

ಕೋಚ್‌ ರಾಹುಲ್‌ ದ್ರಾವಿಡ್‌ ಸೇರಿ 15 ಆಟಗಾರರ ತಂಡಕ್ಕೆ ತಲಾ 5 ಕೋಟಿ.

ಬ್ಯಾಟಿಂಗ್‌ ಕೋಚ್‌ ವಿಕ್ರಂ ರಾಥೋಡ್‌, ಬೌಲಿಂಗ್‌ ಕೋಚ್‌ ಪರಸ್‌, ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ಗೆ ತಲಾ 2.5 ಕೋಟಿ.

ಫಿಸಿಯೋಥೆರಪಿಸ್ಟ್‌ಗಳಾದ ಕಮಲೇಶ್‌ ಜೈನ್‌, ಯೋಗೇಶ್‌ ಪಾರ್ಮರ್‌, ತುಳಸಿ ರಾಮ್‌ ಯುವರಾಜ್‌ಗೆ 2 ಕೋಟಿ, ಥ್ರೋಡೌನ್‌ ಸ್ಪೆಷಲಿಸ್ಟ್‌ಗಳಾದ ರಾಘವೇಂದ್ರ ದ್ವಗಿ, ನುವಾನ್‌ ಉಡೆನೆಕೆ, ದಯಾನಂದ ಗರಣಿಗೆ ತಲಾ 2 ಕೋಟಿ, ಸ್ಟ್ರೆಂತ್‌ ಮತ್ತು ಕಂಡಿಷನಿಂಗ್‌ ಕೋಚ್‌ಗಳಾದ ರಾಜೀವ್‌ ಕುಮಾರ್‌, ಅರುಣ್‌ ಕಾನಡೆ ಹಾಗೂ ಸೋಹಂ ದೇಸಾಯಿ ಅವರಿಗೆ ತಲಾ 2 ಕೋಟಿ.

ಅಜಿತ್‌ ಅಗರ್ಕರ್‌, ಶಿವಸುಂದರ್‌ ದಾಸ್‌, ಸುಬ್ರತೋ ಬ್ಯಾನರ್ಜಿ, ಸಲೀಲ್‌ ಅಂಕೋಲ, ಶ್ರೀಧರನ್‌ ಶರತ್‌ಗೆ ತಲಾ 1 ಕೋಟಿ.

ರಿಂಕು ಸಿಂಗ್‌, ಶುಭಮನ್‌ ಗಿಲ್‌, ಆವೇಶ್‌ ಖಾನ್‌, ಖಲೀಲ್‌ ಅಹಮದ್‌ಗೆ ತಲಾ 1 ಕೋಟಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read