ತುಂಬೆ ಗಿಡದ ‘ಉಪಯೋಗʼಗಳ ಬಗ್ಗೆ ನಿಮಗೆ ಗೊತ್ತಾ…..?

ತುಂಬೆ ಹೂವು  ಶಿವನಿಗೆ ಪ್ರಿಯವಾದ ಹೂವು. ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ.

ಈ ಸಣ್ಣ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರ ಬಿಳಿ ಬಣ್ಣದ ಹೂವುಗಳಿಂದ ಹಲವು ಪ್ರಯೋಜನಗಳಿವೆ.

ಹೊಟ್ಟೆಯಲ್ಲಿ ಹುಳು ಆಗಿದ್ದರೆ ತುಂಬೆ ಹೂವು ಮತ್ತು ಅದರ ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಹುಳುಗಳು ನಾಶವಾಗುತ್ತವೆ.

ಇನ್ನು ಪದೇ ಪದೇ ಜ್ವರ ಬರುತ್ತಿದ್ದರೆ ತುಂಬೆ ಎಲೆ ರಸಕ್ಕೆ ಕಾಳು ಮೆಣಸಿನ ಪುಡಿ ಹಾಕಿ ಸೇವನೆ ಮಾಡಿದರೆ ಜ್ವರ ಕಡಿಮೆ ಆಗುತ್ತದೆ. ಮನೆಯಲ್ಲಿ ಸೊಳ್ಳೆಗಳ ಕಾಟ ಮತ್ತು ಕೀಟಗಳ ಕಾಟ ಹೆಚ್ಚು ಇದ್ದರೆ ತುಂಬೆ ಗಿಡದ ಎಲೆ ಒಣಗಿಸಿ ಹೊಗೆ ಹಾಕಿದರೆ ಅವು ದೂರ ಹೋಗುತ್ತವೆ.

ಮನೆಯ ಅಂಗಳದಲ್ಲಿ ತುಂಬೆ ಗಿಡವನ್ನು ಬೆಳೆಸುವುದರಿಂದ ಕೀಟಗಳ ಬಾಧೆಯನ್ನು ತಪ್ಪಿಸಬಹುದು. ಇನ್ನು ಚರ್ಮದ ತುರಿಕೆ ಮತ್ತು ಅಲರ್ಜಿ ಇದ್ದರೆ ಈ ತುಂಬೆ ಎಲೆಯನ್ನು ಪೇಸ್ಟ್ ಮಾಡಿ ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ತುರಿಕೆ – ಅಲರ್ಜಿ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read