ನಿಮ್ಮ ಬಳಿ ಐ ಶ್ಯಾಡೋ ಪ್ಯಾಲೆಟ್ ಇದೆಯಾ..…?

ಮೇಕಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಹೆಣ್ಣುಮಕ್ಕಳಿಗಂತೂ ಮೇಕಪ್ ಕಿಟ್ ಕಂಡರೆ ಸಾಕು ಖುಷಿ ಹೆಚ್ಚಾಗುತ್ತದೆ. ಎಷ್ಟೇ ಚೆಂದವಾಗಿದ್ದರೂ ಮೇಕಪ್ ಬೇಕೆ ಬೇಕು ಅನಿಸುತ್ತದೆ. ಆದರೆ ಎಲ್ಲರಿಗೂ ಮೇಕಪ್ ಕಿಟ್ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಮದುವೆ ಫಂಕ್ಷನ್, ಇನ್ಯಾವುದೋ ಪಾರ್ಟಿ ಇದ್ದಾಗ ಮೇಕಪ್ ಇಲ್ಲದೇ ಹೋಗುವುದಕ್ಕೂ ಮನಸ್ಸಾಗುವುದಿಲ್ಲ. ಅಂತಹವರು ಐ ಶ್ಯಾಡೋ ಪ್ಯಾಲೆಟ್ ಒಂದು ತೆಗೆದುಕೊಂಡರೆ ಸಾಕು. ಇದೊಂದು ಇದ್ದರೆ ಪಾರ್ಲರ್ ರೀತಿ ಮೇಕಪ್ ನೀವು ಮನೆಯಲ್ಲಿ ಮಾಡಿಕೊಳ್ಳಬಹುದು.

* ಐ ಮೇಕಪ್ ಬ್ರಷ್ ಅನ್ನು ತುಸು ಒದ್ದೆ ಮಾಡಿಕೊಂಡು ಐ ಶ್ಯಾಡೋದಲ್ಲಿನ ಕಪ್ಪು ಬಣ್ಣವನ್ನು ಬಳಸಿಕೊಂಡು ಐ ಲೈನರ್ ರೀತಿ ಮಾಡಿಕೊಳ್ಳಬಹುದು.

*ಇನ್ನು ಹುಬ್ಬನ್ನು ಸುಂದರಗೊಳಿಸಲು ಐಶ್ಯಾಡೋ ದಲ್ಲಿರುವ ಕಪ್ಪು ಅಥವಾ ಕಂದು ಬಣ್ಣ ಬಳಸಿಕೊಂಡು ಐ ಬ್ರೋ ಅನ್ನು ಫಿಲ್ ಮಾಡಬಹುದು.

* ನಿಮ್ಮ ಮುಖವನ್ನು ಮತ್ತಷ್ಟು ಅಂದಗೊಳಸಿಲು ಕಂಟೊರ್ (contour) ಆಗಿಯೂ ಇದನ್ನು ಬಳಸಬಹುದು. ಇದರಲ್ಲಿನ ಡಾರ್ಕ್ ಶೇಡ್ ಬಳಸಿಕೊಂಡು ದವಡೆ ಹಾಗೂ ಕೆನ್ನೆಗೆ ಕಂಟೊರಿಂಗ್ ಮಾಡಬಹುದು.

*ಇನ್ನು ಮುಖದಲ್ಲಿನ ಡಾರ್ಕ್ ಸರ್ಕಲ್ ಅನ್ನು ಮರೆಮಾಚಲು ಕನ್ಸಿಲ್ ಅಥವಾ ಕಲರ್ ಕರೆಕ್ಟರ್ ಆಗಿಯೂ ಇದನ್ನು ಬಳಸಬಹುದು. ಇದರಲ್ಲಿನ ಕೇಸರಿ, ಕೆಂಪು, ಹಸಿರು, ಹಳದಿ ಶೇಡ್ ಬಳಸಿಕೊಂಡು ನಿಮ್ಮ ಮುಖದಲ್ಲಿನ ಮೊಡವೆ ಕಲೆ, ಡಾರ್ಕ್ ಸರ್ಕಲ್ ಅನ್ನು ಮರೆಮಾಚಬಹುದು.

* ಕೆನ್ನೆಗೆ ಇದರಲ್ಲಿನ ಕೆಂಪು ಅಥವಾ ಗುಲಾಬಿ ಬಣ್ಣವನ್ನು ಬಳಸಿಕೊಂಡು ಬ್ಲಷ್ ಆಗಿಯೂ ಬಳಸಬಹುದು.

*ಇಷ್ಟೆಲ್ಲಾ ಇದ್ದು ತುಟಿಗೆ ರಂಗು ಇಲ್ಲದಿದ್ದರೆ ಹೇಗೆ ಅಲ್ವಾ…? ಐಶ್ಯಾಡೋ ದಲ್ಲಿರುವ ಕೆಂಪು, ಗುಲಾಬಿ, ಕಂದು ಬಣ್ಣ ಬಳಸಿಕೊಂಡು ತುಟಿಗೂ ರಂಗು ತುಂಬಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read