ಪ್ರತಿದಿನ ರಾತ್ರಿ ತಡವಾಗಿ ಊಟ ಮಾಡ್ತೀರಾ ? ನಿಮಗೆ ಕಾದಿದೆ ಇಂಥಾ ಅಪಾಯ…..!

ಕೆಲವರಿಗೆ ರಾತ್ರಿ ಬಹಳ ತಡವಾಗಿ ಊಟ ಮಾಡಿ ಅಭ್ಯಾಸ. ತಡರಾತ್ರಿಯ ಭೋಜನ ನಿಮಗೆ ಬಹಳಷ್ಟು ಹಾನಿ ಮಾಡುತ್ತದೆ. ಅಪರೂಪಕ್ಕೊಮ್ಮೆ ಸಮಯದ ಅಭಾವದಿಂದ ತಡವಾಗಿ ತಿಂದರೆ ತೊಂದರೆಯಿಲ್ಲ. ಆದರೆ ಪ್ರತಿದಿನ ತಡರಾತ್ರಿ ಊಟ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರಾತ್ರಿ 8 ಗಂಟೆಯ ನಂತರ ಊಟ ಮಾಡುವುದು ನಿಮ್ಮ ಆರೋಗ್ಯಕ್ಕೆ ಎಲ್ಲ ರೀತಿಯಿಂದಲೂ ಹಾನಿಕಾರಕ.

ತಡರಾತ್ರಿ ಆಹಾರ ಸೇವಿಸುವುದರಿಂದ ಅದು ಸರಿಯಾಗಿ ಜೀರ್ಣವಾಗುವುದಿಲ್ಲ. ದೇಹದ ಚಯಾಪಚಯವು ನಿಧಾನಗತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ತಡವಾಗಿ ಆಹಾರವನ್ನು ಸೇವಿಸುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ, ಇದರಿಂದಾಗಿ ಮರುದಿನ ಬೆಳಿಗ್ಗೆ ಹೊಟ್ಟೆ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಪ್ರತಿದಿನ ರಾತ್ರಿ ತಡವಾಗಿ ಊಟ ಮಾಡಿದರೆ ಮಲಬದ್ಧತೆ ಮತ್ತು ಅಜೀರ್ಣದ ಸಮಸ್ಯೆ ಶುರುವಾಗುತ್ತದೆ.

ರಾತ್ರಿ ಲೇಟಾಗಿ ಊಟ ಮಾಡುವುದರಿಂದ ತೂಕ ಹೆಚ್ಚಾಗಬಹುದು. ನೀವು ತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಬಯಸಿದರೆ ಊಟವಾಗಿ 3 ಗಂಟೆಗಳ ನಂತರ ಮಲಗಬೇಕು. ತಡರಾತ್ರಿ ಊಟ ಮಾಡಬೇಡಿ.  ಲೇಟ್‌ ನೈಟ್‌ ಡಿನ್ನರ್‌ನಿಂದ ನಿದ್ದೆಗೂ ಸಮಸ್ಯೆಯಾಗಬಹುದು. ಯಾಕಂದ್ರೆ ಅದು ದೇಹದ ನೈಸರ್ಗಿಕ ಚಕ್ರದ ಮೇಲೆ ಪರಿಣಾಮ ಬೀರುತ್ತದೆ.

ಈ ಕಾರಣದಿಂದಾಗಿ ನೀವು ಮಲಗುವ ಸಮಯದಲ್ಲಿ ಚಂಚಲತೆಯನ್ನು ಅನುಭವಿಸುತ್ತೀರಿ, ಇದರಿಂದಾಗಿ ಸರಿಯಾಗಿ ನಿದ್ದೆ ಬರುವುದಿಲ್ಲ. ರಾತ್ರಿ ಊಟವನ್ನು ತಡವಾಗಿ ಮಾಡುವುದರಿಂದ ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ ನೀವು ಅನೇಕ ಹೃದಯ ಸಂಬಂಧಿ ಸಮಸ್ಯೆಗಳಿಗೆ ಬಲಿಯಾಗಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read