ನೀವೂ ಊಟದ ಮಧ್ಯೆ ಸಿಗುವ ʼಕರಿಬೇವಿನ ಎಲೆʼ ತಿನ್ನದೇ ಪಕ್ಕಕ್ಕಿಡ್ತೀರಾ…..? ಹಾಗಾದ್ರೆ ಇಂದೇ ಬಿಟ್ಟು ಬಿಡಿ ಈ ಅಭ್ಯಾಸ

ಪಲ್ಯಕ್ಕೋ, ಸಾಂಬಾರಿಗೋ, ಕರಿ ಬೇವಿನ ಎಲೆ ಹಾಕಿದರೆ, ಅದನ್ನು ತಿನ್ನುವ ಅಭ್ಯಾಸ ಸಾಮಾನ್ಯವಾಗಿ ನಮಗಿರುವುದಿಲ್ಲ. ಅದನ್ನು ಎತ್ತಿ ಪಕ್ಕಕ್ಕಿಡುತ್ತೇವೆ. ಆದರೆ ಪಕ್ಕಕ್ಕಿಡುವ ಕರಿಬೇವಿನ ಎಲೆಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ.

* ಮುಖ್ಯವಾಗಿ ಇದರಲ್ಲಿ ಕಬ್ಬಿಣ ಮತ್ತು ಫೋಲಿಕ್ ಆಸಿಡ್ ಅಂಶಗಳಿವೆ. ಇದು ಗರ್ಭಿಣಿಯರಿಗೆ, ಹೆಣ್ಣುಮಕ್ಕಳಿಗೆ ಒಳ್ಳೆಯದು. ಸಾಮಾನ್ಯವಾಗಿ ರಕ್ತದ ಕೊರತೆ ಅನಿಮೀಯಾದಿಂದ ಬಳಲುತ್ತಿರುವವರು, ಕರಿಬೇವಿನ ಎಲೆಯನ್ನು ತಿಂದಷ್ಟೂ ಒಳ್ಳೆಯದು.

* ಮದ್ಯ ಸೇವಿಸುವವರು ಲಿವರ್, ಕಿಡ್ನಿ ಸಮಸ್ಯೆಗೆ ತುತ್ತಾಗುವುದು ಸಹಜ. ಹೀಗಾಗಿ ಮದ್ಯಪಾನಿಗಳು ಕರಿಬೇವಿನ ಎಲೆಯನ್ನು ಸೇವಿಸುವುದರಿಂದ ಈ ತೊಂದರೆ ನಿವಾರಿಸಿಕೊಳ್ಳಬಹುದು ಎಂದು ಕೆಲವು ಸಂಶೋಧನೆಗಳು ಹೇಳಿವೆ.

* ಮಧುಮೇಹಿಗಳಿಗಂತೂ ಇದು ರಾಮಬಾಣ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯಲು ಕರಿಬೇವಿನ ಎಲೆಗಳು ಸಹಕಾರಿ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಿರುವುದರಿಂದ ಹೃದಯದ ಆರೋಗ್ಯಕ್ಕೂ ಒಳ್ಳೆಯದು.

* ಮೂಗು ಕಟ್ಟುವುದು, ಶ್ವಾಸಕೋಶ ಸಮಸ್ಯೆಗಳಿಗೂ ಕರಿಬೇವಿನ ಎಲೆಗಳ ಉಪಯೋಗ ಉತ್ತಮ. ಅಲ್ಲದೆ ಚರ್ಮದ ಸಂರಕ್ಷಣೆ, ಕೂದಲು ಸೊಂಪಾಗಿ ಬೆಳೆಯಲೂ ಕರಿಬೇವಿನ ಎಲೆ ಉಪಯುಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read