ʼಖಿನ್ನತೆʼ ನಿವಾರಿಸಲು ಪ್ರತಿದಿನ ಈ ಯೋಗಾಭ್ಯಾಸ ಮಾಡಿ

ಜೀವನದಲ್ಲಿ ಒತ್ತಡ, ಚಿಂತೆ, ಸಂಕಷ್ಟಗಳು ಹೆಚ್ಚಾದಾಗ ಮನುಷ್ಯ ಖಿನ್ನತೆಗೆ ಜಾರುತ್ತಾನೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಖಿನ್ನತೆ ಕೆಲವೊಮ್ಮೆ ಮನುಷ್ಯನನ್ನು ಸಾವಿನ ದಾರಿಗೆ ಕರೆದೊಯ್ಯಬಹುದು. ಹಾಗಾಗಿ ಈ ಖಿನ್ನತೆಯನ್ನು ದೂರಮಾಡಲು ಈ ಯೋಗಾಸನಗಳನ್ನು ಪ್ರತಿದಿನ ಅಭ್ಯಾಸ ಮಾಡಿ.

*ಬಾಲಸಾನ (ಮಕ್ಕಳ ಭಂಗಿ ) : ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲನ್ನು ಸೊಂಟಕ್ಕಿಂತ ಅಂಗಲವಾಗಿಸಿ ಮುಂದಕ್ಕೆ ಬಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ.

*ಹಲಾಸನ (ನೇಗಿಲು ಭಂಗಿ) : ನೀವು ಬೆನ್ನಿನ ಮೇಲೆ ಮಲಗಿಕೊಂಡು ನಿಮ್ಮ ಕೈಗಳನ್ನು ನೇರವಾಗಿಟ್ಟು ಅಂಗೈಯನ್ನು ಕೆಳಮುಖವಾಗಿರಿಸಬೇಕು. ಬಳಿಕ ನಿಮ್ಮ ಕಾಲುಗಳನ್ನು ನಿಮ್ಮ ತಲೆಯ ಮೇಲೆ ಕಾಲ್ಬೆರಳು ನೆಲ ಸ್ಪರ್ಶಿಸುವಂತೆ ಇರಿಸಿ. ನಿಮ್ಮ ದೇಹ ಲಂಬವಾಗಿರಲಿ. ಒಂದು ನಿಮಿಷ ಈ ಭಂಗಿಯಲ್ಲಿ ಇರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read