ʼಅದೃಷ್ಟʼ ಒಲಿಯಲು ಮಂಗಳವಾರ ಅವಶ್ಯವಾಗಿ ಮಾಡಿ ಈ ಕೆಲಸ

ಕಣ್ಣಿಗೆ ಕಾಣ್ತಾ ಕಾಣ್ತಾ ಯಶಸ್ಸು ಕೈ ತಪ್ಪಿ ಹೋಗುವುದುಂಟು. ಎಷ್ಟು ಶ್ರಮ ಪಟ್ಟರೂ ಪ್ರತಿಫಲ ಮಾತ್ರ ಶೂನ್ಯ. ಮಂಗಳವಾರ  ಕೆಲ ಕೆಲಸಗಳನ್ನು ಮಾಡಿದ್ರೆ ಲಾಭ ಸಿಗುವ ಜೊತೆಗೆ ಮುಚ್ಚಿದ್ದ ಅದೃಷ್ಟದ ಬಾಗಿಲು ತೆರೆಯುತ್ತದೆ.

ಮಂಗಳವಾರ ತಾಂತ್ರಿಕ ಹನುಮಾನ್ ಯಂತ್ರ ಸ್ಥಾಪನೆ ಮಹತ್ವ ಪಡೆದಿದೆ. ಮಂಗಳವಾರ ನೀವು ಪೂಜೆ ಮಾಡುವ ಸ್ಥಳದಲ್ಲಿ ತಾಂತ್ರಿಕ ಹನುಮಾನ್ ಯಂತ್ರವನ್ನು ಸ್ಥಾಪನೆ ಮಾಡಿ. ಪ್ರತಿದಿನ ಈ ಯಂತ್ರದ ಪೂಜೆ ಮಾಡಿ. ಶೀಘ್ರದಲ್ಲಿಯೇ ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ.

ಮಂಗಳವಾರ ಸಂಜೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆ ಅಥವಾ ಶುದ್ಧ ತುಪ್ಪದಲ್ಲಿ ದೀಪ ಹಚ್ಚಿ. ಅಲ್ಲಿಯೇ ಕುಳಿತು ಹನುಮಾನ್ ಚಾಲೀಸ್ ಓದಿ.

ಮಂಗಳವಾರ ಬೆಳಿಗ್ಗೆ ಸ್ನಾನ ಮಾಡಿದ ನಂತ್ರ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಬೆಳಗಿ. ಪೂರ್ವಕ್ಕೆ ಮುಖ ಮಾಡಿ ತುಳಸಿ ಮಾಲೆಯನ್ನು ಹಿಡಿದು ರಾಮನ ಜಪ ಮಾಡಿ. ಕನಿಷ್ಠ 11 ಮಾಲೆಗಳ ಜಪ ಅವಶ್ಯ.

ಮಂಗಳವಾರ ಸಂಜೆ ಹನುಮಂತನ ದೇವಸ್ಥಾನಕ್ಕೆ ಹೋಗಿ ಗುಲಾಬಿ ಹೂವಿನ ಮಾಲೆ ಅರ್ಪಣೆ ಮಾಡಿ ಬನ್ನಿ. ಹನುಮಂತನನ್ನು ಪ್ರಸನ್ನಗೊಳಿಸಲು ಇದು ಒಳ್ಳೆ ಮಾರ್ಗ. ಈ ಮಾರ್ಗದಿಂದ ಎಲ್ಲ ಬೇಡಿಕೆಗಳು ಈಡೇರುತ್ತವೆ.

ಮಂಗಳವಾರ ಬೆಳಿಗ್ಗೆ ಸ್ನಾನವಾದ ಬಳಿಕ ಅಂಜೂರದ ಒಂದು ಎಲೆಯನ್ನು ತೆಗೆದುಕೊಂಡು ಬನ್ನಿ. ಈ ಎಲೆಯನ್ನು ಸ್ವಚ್ಛಗೊಳಿಸಿ ಸ್ವಲ್ಪ ಸಮಯ ಹನುಮಂತನ ಮುಂದಿಡಿ. ನಂತ್ರ ಶ್ರೀರಾಮನ ಹೆಸರನ್ನು ಅದರ ಮೇಲೆ ಬರೆಯಿರಿ. ಈ ಎಲೆಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read