ಚಂದ್ರಗ್ರಹಣದ ಬಳಿಕ ಮನೆಯ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ; ಲಕ್ಷ್ಮಿದೇವಿಯ ಕೃಪೆ ನಿಮ್ಮ ಮೇಲಿರುತ್ತದೆ…!

2023ರ ಕೊನೆಯ ಚಂದ್ರಗ್ರಹಣ ಶರದ್ ಪೂರ್ಣಿಮೆಯ ದಿನದಂದೇ ಸಂಭವಿಸುತ್ತಿದೆ. 30 ವರ್ಷಗಳ ನಂತರ ಈ ದಿನ ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷ. ಚಂದ್ರಗ್ರಹಣ ಯಾವಾಗಲೂ ಹುಣ್ಣಿಮೆಯ ದಿನವೇ ಸಂಭವಿಸುತ್ತದೆ. ಭಾರತದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದ್ದು, ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿವಿಧ ಸಮಯಗಳಲ್ಲಿ ನೋಡಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು. ಈ ಅವಧಿಯಲ್ಲಿ ದೇವರ ವಿಗ್ರಹ ಮತ್ತು ಪೂಜೆಗೆ ಸಂಬಂಧಿಸಿದ ವಸ್ತುಗಳನ್ನು ಮುಟ್ಟುವುದನ್ನು ನಿಷೇಧಿಸಲಾಗಿದೆ. ಸೂತಕ ಕಾಲದಿಂದಲೂ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

ಗ್ರಹಣದ ಸಮಯದಲ್ಲಿ ರಾಹುವಿನ ಪ್ರಭಾವವು ತುಂಬಾ ಪ್ರಬಲವಾಗಿರುವುದರಿಂದ ಇದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಚಂದ್ರಗ್ರಹಣವು ರಾತ್ರಿ 11:30ಕ್ಕೆ ಪ್ರಾರಂಭವಾಗಿ 3:56 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಬಳಿಕ ಬೆಳಗ್ಗೆ ಬೇಗನೆ ಎದ್ದು ಕೆಲವು ಪ್ರಮುಖ ಕಾರ್ಯಗಳನ್ನು ಮಾಡಬೇಕು. ಈ ಕ್ರಮಗಳನ್ನು ಅನುಸರಿಸಿದ್ರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸಬಹುದು.

ಗ್ರಹಣದ ನಂತರ ಮಾಡಿ ಈ ಕೆಲಸ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರಗ್ರಹಣ ಮುಗಿದ ತಕ್ಷಣ  ಸೂತಕವೂ ಕೊನೆಗೊಳ್ಳುತ್ತದೆ. ಗ್ರಹಣದ ಬಳಿಕ ಮನೆಯ ಮೂಲೆ ಮೂಲೆಯಲ್ಲಿ ಗಂಗಾಜಲವನ್ನು ಚಿಮುಕಿಸಿ. ಮನೆಯ ಮುಖ್ಯದ್ವಾರಕ್ಕೆ ಗಂಗಾಜಲವನ್ನು ಚಿಮುಕಿಸಿ ಸ್ವಚ್ಛಗೊಳಿಸಿ. ಲಕ್ಷ್ಮಿ ದೇವಿಯು ಮನೆಯ ಮುಖ್ಯದ್ವಾರದಿಂದ ಮಾತ್ರ ಮನೆಗೆ ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ.

ಮನೆ, ಅಂಗಡಿ, ಕಚೇರಿಗಳನ್ನು ಸ್ವಚ್ಛಗೊಳಿಸಬೇಕು. ಗಂಗಾಜಲ ಅಥವಾ ಯಾವುದೇ ಪವಿತ್ರ ನದಿಯ ನೀರನ್ನು ಚಿಮುಕಿಸುವುದು ಉತ್ತಮ. ಇದು ಗ್ರಹಣದ ಪರಿಣಾಮಗಳನ್ನು ಸಹ ತೆಗೆದುಹಾಕುತ್ತದೆ.

ಗ್ರಹಣದ ನಂತರ ಸ್ನಾನ ಮಾಡಬೇಕು. ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಗಂಗಾಜಲವನ್ನು ಸಿಂಪಡಿಸಿಕೊಳ್ಳಿ. ಸ್ನಾನ ಮಾಡಿ ನಂತರ ಮೊದಲು ದೇವರ ಮನೆಯನ್ನು ಸ್ವಚ್ಛಗೊಳಿಸಿ. ದೇವರ ಮನೆಗೂ ಗಂಗಾಜಲವನ್ನು ಸಿಂಪಡಿಸಿ. ನಂತರ ಆಹಾರ ಪದಾರ್ಥಗಳ ಮೇಲೆ ಗಂಗಾಜಲವನ್ನು ಸಿಂಪಡಿಸಿ ಮತ್ತು ಅವುಗಳನ್ನು ಶುದ್ಧೀಕರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read