ದಿನವಿಡಿ ಮೂಡ್ ಸರಿಯಾಗಿರಲು ಹೀಗೆ ಮಾಡಿ

ಕೆಲವರು ದಿನವಿಡೀ ನನ್ನ ಮೂಡ್ ಔಟ್ ಆಗಿದೆ, ಬೆಳಗಿನಿಂದಲೇ ಈ ದಿನ ನನಗೆ ಸರಿ ಇರಲಿಲ್ಲ ಎಂದು ಹೇಳುವುದನ್ನು ನೀವು ಕೇಳಿರುವಿರಿ. ಅದಕ್ಕೆ ನೀವು ಅನುಸರಿಸುವ ದಿನಚರಿಯೂ ಕಾರಣವಾಗಿರಬಹುದು. ಹೇಗೆನ್ನುತ್ತೀರಾ?

ಬೆಳಗ್ಗೆ ಎಲರಾಂ ಆದಾಕ್ಷಣ ನಿದ್ದೆಯಿಂದ ಒಮ್ಮೆಲೇ ಎದ್ದು ಕೂರದಿರಿ. ನಿಧಾನಕ್ಕೆ ಇಂದಿನ ದಿನಚರಿಯನ್ನು ನೆನಪಿಸುತ್ತಾ ಏಳಿ. ಯಾವುದೇ ಕಾರಣಕ್ಕೂ ಅಲರಾಂ ಅನ್ನು ಸ್ನೂಸ್ ಮಾಡಿ ಮುಂದೆ ಹಾಕದಿರಿ.

ಬೆಳಗ್ಗೆ ಎದ್ದಾಕ್ಷಣ ಸ್ಟ್ರಾಂಗ್ ಕಾಫಿ‌, ಚಹಾ ಕುಡಿಯುವುದರಿಂದ ನಿಮ್ಮ ದಿನ ಫ್ರೆಶ್ ಆಗಿರುತ್ತದೆ ಎಂದುಕೊಂಡರೆ ಅದು ನಿಮ್ಮ ತಪ್ಪು. ಅದರ ಬದಲು ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರು ಕುಡಿಯಿರಿ. ಒಂದು ಗಂಟೆ ಬಳಿಕವಷ್ಟೇ ಕಾಫಿ, ಚಹಾ ಸೇವಿಸಿ.

ಸಿಟ್ಟು ಮಾಡಿಕೊಳ್ಳದಿರಿ. ನಿಧಾನಕ್ಕೆ ಕೆಲಸ ಮಾಡುತ್ತಾ ಬನ್ನಿ. ಅಡುಗೆ ಮನೆಯ ಕಿಟಕಿ ತೆಗೆದಿಡಿ. ಮುಂಜಾನೆಯ ತಂಗಾಳಿಗೆ ಒಗ್ಗಿಕೊಳ್ಳಿ. ಸಮಯವಿದ್ದರೆ ಕನಿಷ್ಠ 10 ನಿಮಿಷವಾದರೂ ವಾಕಿಂಗ್ ಅಥವಾ ವ್ಯಾಯಾಮ ಮಾಡಿ.

ಧೂಮಪಾನ, ಮದ್ಯಪಾನದಿಂದ ದೂರವಿದ್ದಷ್ಟು ನಿಮಗೇ ಒಳ್ಳೆಯದು. ಮೊಬೈಲ್ ಅವಶ್ಯವಿದ್ದರಷ್ಟೇ ಒತ್ತಿ. ಕಣ್ಣು ಬಿಡುವಾಗಲೇ ಸಾಮಾಜಿಕ ಜಾಲತಾಣಗಳನ್ನು ಅರಸದಿರಿ. ಮನಸ್ಸಿಗೆ ಮುದ ನೀಡುವ ಸಂಗೀತ ಹಾಕಿ ಹಾಡು ಕೇಳುತ್ತಾ ಕೆಲಸ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read