‘ಅತ್ತೆ-ಸೊಸೆ’ ಸಂಬಂಧ ಗಟ್ಟಿಯಾಗಿರಲು ಹೀಗೆ ಮಾಡಿ

ಅತ್ತೆ-ಸೊಸೆ ಜಗಳ ಸಾಮಾನ್ಯ. ಕೆಲ ಮನೆಗಳಲ್ಲಿ ಯಾವಾಗ್ಲೂ ಅತ್ತೆ-ಸೊಸೆ ಹಾವು-ಮುಂಗುಸಿಯಂತೆ ಜಗಳವಾಡ್ತಿರುತ್ತಾರೆ. ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗುತ್ತದೆ. ಮನೆಯಲ್ಲಿರುವ ಕೆಲ ವಸ್ತುಗಳು ವಾಸ್ತು ರೀತಿಯಲ್ಲಿಲ್ಲವಾದಲ್ಲಿ ಅತ್ತೆ-ಸೊಸೆ ನಡುವೆ ಸಮಸ್ಯೆ ಶುರುವಾಗುತ್ತದೆ.

ಮನೆಯ ಈಶಾನ್ಯ ಭಾಗದಲ್ಲಿ ಎಂದೂ ಕಸದ ಬುಟ್ಟಿಯನ್ನು ಇಡಬೇಡಿ. ಇದರಿಂದ ಮನೆಯ ಸದಸ್ಯರಲ್ಲಿ ದ್ವೇಷ ಭಾವ ಉತ್ಪತ್ತಿಯಾಗುತ್ತದೆ. ಹಾಗಾಗಿ ಮನೆಯ ಈಶಾನ್ಯ ಭಾಗವನ್ನು ಸ್ವಚ್ಛವಾಗಿಡಿ.

ಅತ್ತೆ-ಸೊಸೆ ನಡುವೆ ಸಂಬಂಧ ಚೆನ್ನಾಗಿಲ್ಲವಾದ್ರೆ ಇಬ್ಬರೂ ತಮ್ಮ ಊಟದ ಮೊದಲ ತುತ್ತನ್ನು ನಾಯಿಗೆ ತಿನ್ನಿಸಬೇಕು. ಹೀಗೆ ಮಾಡಿದ್ರೆ ಇಬ್ಬರ ನಡುವೆ ಪ್ರೀತಿ ಚಿಗುರುತ್ತದೆ.

ಇಬ್ಬರ ನಡುವೆ ಗಲಾಟೆಯಾಗ್ತಾ ಇದ್ದರೆ ಇಬ್ಬರ ರೂಮಿನಲ್ಲಿಯೂ ಅತ್ತೆ-ಸೊಸೆ ಒಟ್ಟಿಗೆ ನಿಂತಿರುವ ಫೋಟೋವನ್ನು ಹಾಕಿ. ಇದರಿಂದ ಇಬ್ಬರ ನಡುವೆ ಇದ್ದ ದ್ವೇಷ ಕಡಿಮೆಯಾಗುತ್ತದೆ.

ಮನೆಯಲ್ಲಿ ಶಾಂತಿ ನೆಲೆಸಲು ಗಾಯತ್ರಿ ಮಂತ್ರವನ್ನು ಹೇಳಿ. ಇದು ಸಾಧ್ಯವಾಗದೇ ಹೋದಲ್ಲಿ ಗಾಯತ್ರಿ ಮಂತ್ರದ ಕ್ಯಾಸೆಟ್ ಹಾಕಿ.

ಪ್ರತಿ ಶನಿವಾರ ಅಶ್ವಥ ಮರಕ್ಕೆ ಅತ್ತೆ-ಸೊಸೆ ಪೂಜೆ ಮಾಡಿ ದೀಪ ಹಚ್ಚಿ.

ಮನೆಯ ಇತರ ಸ್ಥಳಗಳಲ್ಲಿ ಭೋಜನ ಮಾಡುವ ಬದಲು ಅಡುಗೆ ಮನೆಯಲ್ಲಿಯೇ ಊಟ ಮಾಡಿ. ಇದರಿಂದ ರಾಹುವಿನ ಪ್ರಭಾವ ಕಡಿಮೆಯಾಗಿ, ಮನೆಯಲ್ಲಿ ಶಾಂತಿ ನೆಲೆಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read