ಹೇನಿನ ಉಪಟಳದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಹೇನುಗಳ ಉಪಟಳವನ್ನು ಎಲ್ಲಾ ಅಮ್ಮಂದಿರು ಕಂಡು ಬೇಸರಿಸಿರಬಹುದು. ಮಕ್ಕಳ ತಲೆಯಲ್ಲಿರುವ ಹೇನನ್ನು ತೊಲಗಿಸಲೂ ಸಾಧ್ಯವಾಗದೆ, ಅದು ನಿಮಗೂ ಹರಡಿ ಹೇಸಿಗೆ ತರಿಸಿರಬಹುದು. ಆಲಿವ್ ಅಯಿಲ್ ನಿಂದ ಹೇನನ್ನು ಸಂಪೂರ್ಣವಾಗಿ ತೊಲಗಿಸಬಹುದು ಎಂಬುದು ನಿಮಗೆ ಗೊತ್ತೇ…?

ನೀಲಗಿರಿ ಎಣ್ಣೆ ನಂಜು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ತಲೆಯ ಹೇನು ತೆಗೆಯಲು ಇದನ್ನು ಆಲಿವ್ ಆಯಿಲ್ ಜೊತೆ ಹಚ್ಚುವುದರಿಂದ ಅದು ಹೇನುಗಳನ್ನು ಕೊಲ್ಲುತ್ತದೆ. 4 ಚಮಚ ಆಲಿವ್ ಆಯಿಲ್ ಗೆ ಹದಿನೈದು ಹನಿ ನೀಲಗಿರಿ ಎಣ್ಣೆ ಹಾಕಿ ನೆತ್ತಿಗೆ ಸೇರಿದಂತೆ ಸಂಪೂರ್ಣ ತಲೆಗೆ ಹಚ್ಚಿ. ಮೂರು ಗಂಟೆ ಬಳಿಕ ಸ್ನಾನ ಮಾಡಿ. ವಾರಕ್ಕೆರಡು ಬಾರಿ ಇದನ್ನು ಪ್ರಯತ್ನಿಸಬಹುದು.

ಆಲಿವ್ ಎಣ್ಣೆಯನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿಯೂ ನೀವು ಪರಿಣಾಮಕಾರಿ ಪ್ರಯೋಜನವನ್ನು ಪಡೆಯಬಹುದು. ಇದರ ಬಳಕೆಯಿಂದ ಹೇನು ಮತ್ತು ಅದರ ಮೊಟ್ಟೆಗಳು ಇಲ್ಲವಾಗುತ್ತವೆ. ಒಂದು ಚಮಚ ಆಲಿವ್ ಎಣ್ಣೆಗೆ ಎರಡು ಚಮಚ ಎಳ್ಳೆಣ್ಣೆ ಸೇರಿಸಿ ಹಚ್ಚಿ ರಾತ್ರಿ ಮಲಗಿ. ಬೇಕಿದ್ದರೆ ಶವರ್ ಕ್ಯಾಪ್ ಧರಿಸಿ. ಮುಂಜಾನೆ ಎದ್ದು ಸ್ನಾನ ಮಾಡಿ. ಉತ್ತಮ ಶ್ಯಾಂಪೂ ಬಳಸಿ. ದೇವರ ದೀಪಕ್ಕೆ ಬಳಸುವ ಎಳ್ಳೆಣ್ಣೆ ಬಳಕೆ ಸಲ್ಲದು. ಹೇನಿಗೆಂದೇ ಮೆಡಿಕಲ್ ಗಳಲ್ಲಿ ಸಿಗುವ ಔಷಧಗಳನ್ನು ಬಳಸದಿರಿ. ಅದರಿಂದ ಸಾಧ್ಯವಾದಷ್ಟು ದೂರವಿರುವುದು ಒಳ್ಳೆಯದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read