ಎಣ್ಣೆಯುಕ್ತ ಆಹಾರ ಸೇವನೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಹೀಗೆ ಮಾಡಿ

ಎಣ್ಣೆಯುಕ್ತ ಆಹಾರವನ್ನು ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಇಷ್ಟಪಡುತ್ತಾರೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಕೆಲವರು ಅದನ್ನೇ ಹೆಚ್ಚು ಸೇವಿಸುತ್ತಾರೆ. ಅಂತವರು ಈ ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಏನನ್ನು ಮಾಡಬಾರದು? ಏನನ್ನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಇವುಗಳನ್ನು ಮಾಡಬಾರದು:

* ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಐಸ್ ಕ್ರೀಂ, ಕೋಲ್ಡ್ ಜ್ಯೂಸ್ ಗಳಂತಹ ತಣ್ಣನೆಯ ಆಹಾರವನ್ನು ಸೇವಿಸಬಾರದು. ಇದರಿಂದ ಆಹಾರ ಜೀರ್ಣವಾಗಲು ಕಷ್ಟವಾಗುತ್ತದೆ. ಇದರಿಂದ ಯಕೃತ್ತು, ಹೊಟ್ಟೆ ಮತ್ತು ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಹೊಟ್ಟೆ ಉಬ್ಬಿಕೊಳ್ಳುತ್ತದೆ.

* ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ನಿದ್ರೆ ಮಾಡಬಾರದು. ಇದರಿಂದ ಕೂಡ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಹಾಗೂ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ತೂಕ ಹೆಚ್ಚಾಗುತ್ತದೆ.

ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಇವುಗಳನ್ನು ಮಾಡಿ:

* ಎಣ್ಣೆಯುಕ್ತ ಆಹಾರ ಸೇವಿಸಿದ ಬಳಿಕ ಸರಿಯಾಗಿ ನೀರನ್ನು ಕುಡಿಯಿರಿ. ಇದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ತ್ಯಾಜ್ಯ ಉತ್ಪನ್ನಗಳು ದೇಹದಿಂದ ಹೊರ ಹೋಗುತ್ತವೆ. ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.

*ನಿಂಬೆ ರಸ ಮಿಶ್ರಿತ ನೀರನ್ನು ಸೇವಿಸಿ. ಇದರಿಂದ ಕೊಬ್ಬಿನಾಂಶ ಕರಗುತ್ತದೆ. ಎಣ್ಣೆಯುಕ್ತ ಆಹಾರ ಸೇವನೆಯಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read