ಒಳ್ಳೆ ಉದ್ಯೋಗ ಬಯಸುವವರು ನೀವಾಗಿದ್ರೆ ಮಾಡಿ ಈ ಕೆಲಸ

ಉತ್ತಮ ಉದ್ಯೋಗ, ಕೈತುಂಬ ಸಂಬಳ, ಸುಖ, ಶಾಂತಿಯನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮಪಡ್ತಾರೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರಬೇಕೆಂದ್ರೆ ಅವಶ್ಯವಾಗಿ ಹಣ ಬೇಕು. ಹಣ ಗಳಿಸಲು ಒಳ್ಳೆ ಉದ್ಯೋಗ ಬೇಕು. ಶಾಸ್ತ್ರಗಳಲ್ಲಿ ಒಳ್ಳೆ ಉದ್ಯೋಗ ಪಡೆಯುವುದು ಹೇಗೆ ಎಂಬುದನ್ನು ಹೇಳಲಾಗಿದೆ.

ನಿಮಗೆ ನೌಕರಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದನ್ನು ದೂರ ಮಾಡಲು ವಿಶೇಷ ಉಪಾಯವನ್ನು ಹೇಳ್ತೇವೆ. ಮನೆಯಲ್ಲಿ ಧನ, ವೈಭವ, ಸಾಮಾಜಿಕ ಗೌರವದಲ್ಲಿ ವೃದ್ಧಿಯಾಗಬೇಕೆಂದ್ರೆ ಇದಕ್ಕಾಗಿ ನೀವು ನಿಯಮಿತ ರೂಪದಲ್ಲಿ ದೇವರ ಪೂಜೆ ಮಾಡಬೇಕು. ಇದ್ರಿಂದ ಬಹು ಬೇಗ ಫಲಿತಾಂಶವನ್ನು ನೀವು ಕಾಣಬಹುದು.

ಒಳ್ಳೆ ಉದ್ಯೋಗ ಬಯಸುವವರು ಬೆಳಿಗಿನ ಸಮಯದಲ್ಲಿ ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಮೊದಲು ಹಸುವಿಗೆ ನೀಡಬೇಕು. ಇದ್ರಿಂದ ಸಾಕಷ್ಟು ಲಾಭವಾಗಲಿದೆ.

ಲಕ್ಷ್ಮಿ ಮೂರ್ತಿ ಮುಂದೆ ಕೆಂಪು ಬಟ್ಟೆಯಲ್ಲಿ 11 ಕವಡೆಯನ್ನು ಕಟ್ಟಿಡಿ. ಪೂಜೆ ನಂತ್ರ ಅದನ್ನು ಮನೆಯ ಏಕಾಂತ ಸ್ಥಳದಲ್ಲಿ ಇಡಿ.  ಪ್ರತಿದಿನ ನೀವು ಅದನ್ನು ಮುಟ್ಟಬಾರದು.

ಮನೆಯಿಂದ ಹೊರಡುವ ಮೊದಲು ತುಳಸಿ ಎಲೆಯನ್ನು ಜೇಬಿನಲ್ಲಿಟ್ಟುಕೊಳ್ಳಿ. ಇದ್ರಿಂದ ಸಾಕಷ್ಟು ಲಾಭವಾಗಲಿದೆ. ನೀವು ಹೊರಟ ಕೆಲಸ ಯಶಸ್ವಿಯಾಗಲಿದೆ.

ಸಂದರ್ಶನಕ್ಕೆ ಹೋಗ್ತಿದ್ದರೆ ಅವಶ್ಯವಾಗಿ ಹನುಮಾನ್ ಚಾಲೀಸ್ ಓದಿಕೊಂಡು ಹೋಗಿ. ಹೀಗೆ ಮಾಡಿದ್ರೆ ಅವಶ್ಯವಾಗಿ ಕೆಲಸ ಪ್ರಾಪ್ತಿಯಾಗಲಿದೆ.

ಪ್ರತಿ ದಿನ ಪಾರಿವಾಳಕ್ಕೆ ಕಾಳುಗಳನ್ನು ಹಾಕಿದ್ರೆ ಶೀಘ್ರವೇ ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read