ಸುಖ ‘ದಾಂಪತ್ಯ’ಕ್ಕೆ ಬೆಡ್ ರೂಂನಲ್ಲಿ ಹೀಗೆ ಮಾಡಿ

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅನೇಕ ಬಾರಿ ಗ್ರಹದೋಷ ಇದಕ್ಕೆ ಕಾರಣವಾಗುತ್ತದೆ. ಜೊತೆಗೆ ವಾಸ್ತು ದೋಷವೂ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ವೈವಾಹಿಕ ಜೀವನದ ಮೇಲೂ ಇದು ಪರಿಣಾಮ ಬೀರುತ್ತದೆ. ದಾಂಪತ್ಯ ಹದಗೆಟ್ಟಾಗ ಜನರು ಚಿಂತೆಗೆ ಬೀಳ್ತಾರೆ. ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಎಂದು ಆಲೋಚನೆ ಮಾಡ್ತಾರೆ.

ದಾಂಪತ್ಯದಲ್ಲಿ ಸಾಮರಸ್ಯ ಕಡಿಮೆಯಾಗ್ತಿದ್ದಂತೆ ಜ್ಯೋತಿಷ್ಯಗಳ ಮೊರೆ ಹೋಗ್ತಾರೆ. ಆದ್ರೆ ರಾಧಾ-ಕೃಷ್ಣನ ಫೋಟೋದಿಂದ ಎಲ್ಲ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎನ್ನುತ್ತದೆ ವಾಸ್ತುಶಾಸ್ತ್ರ. ಪ್ರೀತಿ ಸಂಕೇತವಾದ ರಾಧ-ಕೃಷ್ಣನ ಫೋಟೋವನ್ನು ಬೆಡ್ ರೂಮಿನ ಗೋಡೆಗೆ ಹಾಕಬೇಕು.

ಚಿತ್ರದ ಚೌಕಟ್ಟು ಕೆಂಪು ಬಣ್ಣದ್ದಾಗಿದ್ದರೆ ಇನ್ನೂ ಉತ್ತಮ. ಇದು ಪತಿ-ಪತ್ನಿ ನಡುವಿನ ಬಿರುಕನ್ನು ದೂರ ಮಾಡುತ್ತದೆ. ಕೆಟ್ಟ ಸಮಯ ಕಡಿಮೆಯಾಗಿ ಶುಭವಾಗುತ್ತದೆ.

ಯಾವ ಗೋಡೆಗೆ ರಾಧಾ-ಕೃಷ್ಣನ ಫೋಟೋ ಹಾಕಿದ್ದೀರೋ ಅದ್ರ ಎದುರಿನ ಗೋಡೆಗೆ ದಂಪತಿ ಫೋಟೋವನ್ನು ಹಾಕಬೇಕು. ಫೋಟೋವನ್ನು ಎದುರಿಗೆ ಕಾಣುವಂತೆ ಹಾಕಿ. ಇದು ದಾಂಪತ್ಯದಲ್ಲಿ ಪ್ರೀತಿ ಹೆಚ್ಚಿಸುತ್ತದೆ.

ರಾಧಾ-ಕೃಷ್ಣ ಫೋಟೋ ಹಾಕುವಾಗ ಗಮನವಿರಲಿ, ಫೋಟೋದಲ್ಲಿ ರಾಧಾ-ಕೃಷ್ಣ ಇಬ್ಬರೇ ಇರಬೇಕು. ರಾಧಾ-ಕೃಷ್ಣ ಜೊತೆ ಗೋಪಿಕೆಯರು ಇರುವಂತಹ ಫೋಟೋ ಹಾಕಬೇಡಿ.

ಪತಿ-ಪತ್ನಿ ಬೆಳಿಗ್ಗೆ-ರಾತ್ರಿ ಈ ಫೋಟೋ ನೋಡಿದ್ರೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಪ್ರೀತಿ ಹಾಗೂ ವಿಶ್ವಾಸ ಹೆಚ್ಚಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read