ʼಸುಂದರ ತ್ವಚೆʼ ನಿಮ್ಮದಾಗಬೇಕಾದ್ರೆ ಹೀಗೆ ಮಾಡಿ

ಬಹುತೇಕರು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕು ಅನ್ನೊ ಧಾವಂತದಲ್ಲಿ ಹಲವಾರು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಆದರೆ ನಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಸಾಕಷ್ಟು ಪದಾರ್ಥಗಳನ್ನು ಬಳಸಿಕೊಂಡು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಇದಕ್ಕೆ ಹೆಚ್ಚೇನೂ ವೆಚ್ಚವಾಗುವುದಿಲ್ಲ.

ಎಲ್ಲರ ಮನೆಯಲ್ಲೂ ಸುಲಭವಾಗಿ ಸಿಗುವ ಮೊಸರನ್ನು ಮುಖಕ್ಕೆ ಲೇಪಿಸಿ ಮೃದುವಾದ ತ್ವಚೆಯನ್ನು ಪಡೆದುಕೊಳ್ಳಬಹುದು. ಇದು ನಮ್ಮ ಚರ್ಮಕ್ಕೆ ಅಗತ್ಯವಾದ ಲ್ಯಾಕ್ಟಿಕ್ ಆ್ಯಸಿಡ್ ನ್ನು ಹೊಂದಿದ್ದು, ತ್ವಚೆಗೆ ಬೇಕಾದ ಪೋಷಕಾಂಶ ಮತ್ತು ತೇವಾಂಶವನ್ನು ಒದಗಿಸುವಂತಹ ಜೀವಸತ್ವಗಳನ್ನು ನೀಡುತ್ತದೆ.

ಗಟ್ಟಿಯಾದ ಮೊಸರನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ, ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ತ್ವಚೆಯಲ್ಲಿನ ಡೆಡ್ ಸ್ಕಿನ್ ಗಳನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಜೊತೆಗೆ ಡ್ರೈ ಸ್ಕಿನ್ ಇರುವವರಿಗೆ ತೇವಾಂಶವನ್ನು ಹೆಚ್ಚಿಸಿ, ರಂಧ್ರಗಳನ್ನು ಬಿಗಿತಗೊಳಿಸುತ್ತದೆ. ಹೀಗೆ ಮಾಡುವುದರಿಂದ ಕಲೆಮುಕ್ತ ತ್ವಚೆಯ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದಾದ ನೈಸರ್ಗಿಕ ವಿಧಾನವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read