ಸುಖ-ಸಮೃದ್ಧಿಗಾಗಿ ಪ್ರತಿದಿನ ಬೆಳಿಗ್ಗೆ ಮನೆಯ ʼಮುಖ್ಯದ್ವಾರʼದ ಬಳಿ ಮಾಡಿ ಈ ಕೆಲಸ

ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ದೋಷವಿದ್ದಲ್ಲಿ ಎಂದೂ ಸುಖ-ಸಮೃದ್ಧಿ ನೆಲೆಸುವುದಿಲ್ಲ. ಈ ದೋಷ ಮಾನವನ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ  ವಾಸ್ತು ಶಾಸ್ತ್ರದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.

ಪೂರ್ವ ಹಾಗೂ ಉತ್ತರ ದಿಕ್ಕಿಗೆ ಮನೆಯ ಮುಖ್ಯ ದ್ವಾರವಿರಬೇಕು. ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ಮನೆಯ ಮುಖ್ಯ ದ್ವಾರವಿದ್ದರೂ ಸಮೃದ್ಧಿ ಮನೆ ಪ್ರವೇಶ ಮಾಡುತ್ತದೆ. ಮನೆಯ ಮುಖ್ಯದ್ವಾರದಿಂದಲೇ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುತ್ತದೆ.

ಪ್ರತಿದಿನ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲು ಮುಖ್ಯದ್ವಾರಕ್ಕೆ ಗಂಗಾ ಜಲವನ್ನು ಹಾಕಿ ಸ್ವಸ್ತಿಕ ಚಿತ್ರವನ್ನು ಬಿಡಿಸಿ. ರಂಗೋಲಿ ಹಾಕಿ. ಇದ್ರಿಂದ ರಾತ್ರಿ ಆಕರ್ಷಿತವಾಗಿದ್ದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ತಾಯಿ ಲಕ್ಷ್ಮಿ ಮನೆಯೊಳಗೆ ಪ್ರವೇಶ ಮಾಡಲು ದಾರಿ ಸಿಗುತ್ತದೆ.

ಪ್ರತಿ ದಿನ ಮನೆಯ ಮುಖ್ಯದ್ವಾರಕ್ಕೆ ಮಂಗಳಕರ ತೋರಣವನ್ನು ಕಟ್ಟಿ. ಇದ್ರಿಂದ ವಾಸ್ತು ದೋಷ ದೂರವಾಗಲಿದೆ. ಅಶೋಕ ಎಲೆ, ಮಾವಿನ ಎಲೆ, ಕರವೀರದ ಎಲೆ, ಅಶ್ವತ್ಥದ ಎಲೆಯ ತೋರಣ ಮಾಡಿ ಮನೆ ಬಾಗಿಲಿಗೆ ಕಟ್ಟಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿಯ ಜೊತೆಗೆ ಆರ್ಥಿಕ ವೃದ್ಧಿಯಾಗುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ.

ಬಿಲ್ವಪತ್ರೆಯಿಂದ ಮಾಡಿದ ತೋರಣವನ್ನು ಮನೆ ಬಾಗಿಲಿಗೆ ಹಾಕುವುದರಿಂದ ಮೇಲಿನ ಯಾವುದೇ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಮನೆಯ ಮುಖ್ಯದ್ವಾರ ಸದಾ ಅಲಂಕಾರಗೊಂಡಿದ್ದಲ್ಲಿ ಗೌರವ ಪ್ರಾಪ್ತಿಯಾಗಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read