ಹುಡುಗಿಯರು ಮಲಗುವ ಮುನ್ನ ಮಾಡಿ ಈ ಕೆಲಸ

ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹುಡುಗಿಯರು ಮೇಕಪ್ ಮೊರೆ ಹೋಗ್ತಾರೆ. ದಿನವಿಡಿ ಮುಖದ ಬಗ್ಗೆ ಗಮನ ಹರಿಸುವ ಹುಡುಗಿಯರು ರಾತ್ರಿ ಮಾತ್ರ ನಿರ್ಲಕ್ಷ್ಯ ಮಾಡ್ತಾರೆ. ಅದೇ ಮೇಕಪ್ ನಲ್ಲಿ ನಿದ್ದೆಗೆ ಜಾರುತ್ತಾರೆ. ಆದ್ರೆ ಹಾಸಿಗೆಗೆ ಹೋಗುವ ಮುನ್ನ ನಮ್ಮ ಚರ್ಮಕ್ಕಾಗಿ ಕೆಲ ಸಮಯ ನೀಡುವುದು ಅತ್ಯಗತ್ಯ.

ಹಾಸಿಗೆಗೆ ಹೋಗುವ ಮೊದಲು ಮೇಕಪ್ಪನ್ನು ಸಂಪೂರ್ಣವಾಗಿ ತೆಗೆದು ಮಲಗಬೇಕು. ಮೇಕಪ್  ಚರ್ಮದ ರಂಧ್ರಗಳನ್ನು ಮುಚ್ಚಿ ಬಿಡುತ್ತದೆ. ಇದರಿಂದಾಗಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನೆನಪಿಟ್ಟು ಹಾಸಿಗೆಗೆ ಹೋಗುವ ಮುನ್ನ ಮೇಕಪ್ ತೆಗೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಒಳ್ಳೆಯ ಫೇಸ್ ವಾಶ್ ನಿಂದ ಮುಖವನ್ನು ತೊಳೆಯುವುದು ಅತಿ ಮುಖ್ಯ. ಇದು ಮೇಕಪ್ ಅಂಶವನ್ನು ಹೋಗಲಾಡಿಸಿ ನಿಮ್ಮ ಚರ್ಮ ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ. ಆದ್ರೆ ಮುಖವನ್ನು ತೊಳೆಯುವ ವೇಳೆ ಬಲ ಪ್ರಯೋಗ ಬೇಡ. ನಿಧಾನವಾಗಿ ಉಜ್ಜಿ ನಂತ್ರ ಕಾಟನ್ ಬಟ್ಟೆಯಿಂದ ಮೆದುವಾಗಿ ಮುಖದ ಮೇಲೆ ಪ್ರೆಸ್ ಮಾಡಿ.

ರಾತ್ರಿ ಮುಖದ ತೇವಾಂಶ ಉಳಿಸಿಕೊಳ್ಳುವುದು ಮುಖ್ಯ. ಏರ್ ಕಂಡಿಷನರ್ ನಲ್ಲಿ ನೀವು ಮಲಗುವುದಾದರೆ ನೈಟ್ ಕ್ರೀಂ ಹಚ್ಚುವುದನ್ನು ಮರೆಯಬೇಡಿ. ಮುಖವನ್ನು ತೊಳೆದ ನಂತರ ನೈಟ್ ಕ್ರೀಮನ್ನು ನಿಧಾನವಾಗಿ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ರಾತ್ರಿಯೂ ನಿಮ್ಮ ಚರ್ಮ ತೇವಾಂಶದಿಂದ ಕೂಡಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read