ಅಡ್ಡ ಪರಿಣಾಮ ಕಡಿಮೆಯಾಗಲು ʼಟೀ-ಕಾಫಿʼ ಸೇವನೆಯ ಮೊದಲು ಮಾಡಿ ಈ ಕೆಲಸ

ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸೇವಿಸುವ ಮೊದಲು ನೀರು ಕುಡಿದರೆ ಆಗುವ ಪ್ರಯೋಜನ ಇನ್ನೂ ಜಾಸ್ತಿ.

ಹಲ್ಲು ಕೊಳೆಯಾಗಲ್ಲ

ಕಡು ಬಣ್ಣದ ಕಾಫಿ, ಟೀ ಕುಡಿಯುವುದರಿಂದ ಬಿಳಿ ಹಲ್ಲು ಹಳದಿಗಟ್ಟುವ ಸಾಧ್ಯತೆಯಿದೆ. ಹೀಗಾಗಿ ಮೊದಲು ನೀರು ಕುಡಿದು ಬಳಿಕ ಕಾಫಿ-ಟೀ ಕುಡಿದರೆ ಈ ಸಮಸ್ಯೆಯಿರದು.

ಅಸಿಡಿಟಿ

ಏನೇ ಸೇವಿಸುವ ಮೊದಲು ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಬರದು. ಕಾಫಿ ಅಥವಾ ಟೀ ಸೇವನೆ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು. ಇಂತಹ ಸಮಯದಲ್ಲಿ ಮೊದಲು ನೀರು ಕುಡಿದು ನಂತರ ಕಾಫಿ ಟೀ ಸೇವಿಸಿದರೆ ಸಮಸ್ಯೆಯಾಗದು.

ಹೊಟ್ಟೆ ಹುಣ್ಣು

ಕೆಲವರಿಗೆ ಕಾಫಿ-ಟೀ ಸೇವನೆ ಹೊಟ್ಟೆ ಹುಣ್ಣಿನಂತಹ ಸಮಸ್ಯೆ ತರುತ್ತದೆ. ಇಂತಹವರು ಮೊದಲು ನೀರು ಕುಡಿದು ನಂತರ ಕಾಫಿ-ಟೀ ಸೇವಿಸಬಹುದು.

ಅಡ್ಡ ಪರಿಣಾಮ ಕಡಿಮೆ

ಕಾಫಿ-ಟೀ ಸೇವನೆ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ. ಹಾಗಿದ್ದರೂ ನಮಗೆ ಚಟವಾಗಿಬಿಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಮೊದಲು ನೀರು ಕುಡಿದು ನಂತರ ಪಾನೀಯ ಸೇವಿಸುವುದರಿಂದ ಅಡ್ಡ ಪರಿಣಾಮಗಳು ಕೊಂಚ ಕಡಿಮೆಯಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read