ಹೀಗೆ ಮಾಡಿ ಸವಿಯಿರಿ ನುಗ್ಗೆಸೊಪ್ಪಿನ ʼಅಕ್ಕಿರೊಟ್ಟಿʼ

ನುಗ್ಗೆಸೊಪ್ಪು ಪೋಷಕಾಂಶಗಳ ಆಗರವಾಗಿದೆ. ಆದರೆ ಇದನ್ನು ಹಾಗೇ ಪಲ್ಯ ಮಾಡಿಕೊಟ್ಟರೆ ಮುಖ ಕಿವುಚುವವರೇ ಹೆಚ್ಚು. ಮಕ್ಕಳಂತೂ ಇದನ್ನು ತಿನ್ನುವುದಕ್ಕೆ ಒಪ್ಪುವುದಿಲ್ಲ. ಹಾಗಾಗಿ ಇದರಿಂದ ರುಚಿಕರವಾದ ರೊಟ್ಟಿ ಮಾಡಿಕೊಟ್ಟರೆ ಎಲ್ಲರೂ ಖುಷಿಯಿಂದ ಸವಿಯುತ್ತಾರೆ. ಮಾಡುವುದಕ್ಕೆ ಕೂಡ ಸುಲಭವಿದೆ.
ಬೇಕಾಗುವ ಸಾಮಾಗ್ರಿ:

2 ಕಪ್-ನುಗ್ಗೆಸೊಪ್ಪು, 1 ಕಪ್- ಅಕ್ಕಿ ಹಿಟ್ಟು, ½ ಕಪ್- ಸಣ್ಣಕ್ಕೆ ಹೆಚ್ಚಿದ ಈರುಳ್ಳಿ, 2 ಹಸಿಮೆಣಸು-ಸಣ್ಣಕ್ಕೆ ಹೆಚ್ಚಿಕೊಳ್ಳಿ, ರುಚಿಗೆ ತಕ್ಕಷ್ಟು-ಉಪ್ಪು, ¼ ಟೀ ಸ್ಪೂನ್ ಜೀರಿಗೆ, ಕಾಯಿತುರಿ-1/2 ಕಪ್, 1ಕಪ್- ನೀರು.

ಮಾಡುವ ವಿಧಾನ:

ಒಂದು ಪಾತ್ರೆಗೆ ಅಕ್ಕಿ ಹಿಟ್ಟು, ತೆಂಗಿನತುರಿ, ಈರುಳ್ಳಿ, ಜೀರಿಗೆ, ಉಪ್ಪು, ಮೆಣಸಿನಕಾಯಿ, ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಗ್ಯಾಸ್ ಮೇಲೆ ನೀರು ಕುದಿಯಲು ಇಡಿ. ಕುದ್ದ ನೀರನ್ನು ಈ ಹಿಟ್ಟಿನ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಸೇರಿಸಿ ಕಲಸಿಕೊಳ್ಳಿ.

ನಂತರ ಇದನ್ನು 10 ನಿಮಿಷ ಒಂದು ತಟ್ಟೆ ಮುಚ್ಚಿ ಇಟ್ಟುಬಿಡಿ. ಹಿಟ್ಟು ನೀರಾಗಿದ್ದರೆ ಸ್ವಲ್ಪ ಅಕ್ಕಿ ಹಿಟ್ಟು ಸೇರಿಸಿ. ನಂತರ ಕಾದ ತವಾಕ್ಕೆ ಎಣ್ಣೆ ಹಚ್ಚಿ ನಂತರ ಒಂದು ಬಟರ್ ಪೇಪರ್ ಅಥವಾ ಬಾಳೆ ಎಲೆಯ ಮೇಲೆ ರೊಟ್ಟಿ ತಟ್ಟಿ ಅದನ್ನು ತವಾಕ್ಕೆ ಹಾಕಿ ಎರಡು ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ತುಪ್ಪದ ಜತೆ ಸವಿಯಲು ಚೆನ್ನಾಗಿರುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read