ನೆಲವನ್ನು ಗುಡಿಸಿ ಒರೆಸುವಾಗ ಈ ತಪ್ಪು ಮಾಡಬೇಡಿ; ವಾಸ್ತು ನಿಯಮಗಳನ್ನು ಅನುಸರಿಸಿ

ವಾಸ್ತುಶಾಸ್ತ್ರಕ್ಕೆ ಸಂಬಂಧಪಟ್ಟ ವಿಷಯಗಳು ಮನೆಯಲ್ಲಿ ಸಂತೋಷ, ಶಾಂತಿ, ನೆಮ್ಮದಿ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತವೆ. ಹಾಗಾಗಿ ಪ್ರತಿ ಕೆಲಸದಲ್ಲಿಯೂ ವಾಸ್ತುವಿನ ನಿಯಮಗಳನ್ನು ಪಾಲಿಸಬೇಕು. ಮನೆ ಗುಡಿಸಿ ಒರೆಸುವ ಸಂದರ್ಭದಲ್ಲಿಯೂ ಕೆಲವೊಂದು ನಿಯಮಗಳು, ನಂಬಿಕೆಗಳಿವೆ.

ಯಾವಾಗಲೂ ಬೆಳಗಿನ ಸಮಯದಲ್ಲಿ ಮನೆಯನ್ನು ಗುಡಿಸಿ ಒರೆಸಬೇಕು. ಮಧ್ಯಾಹ್ನದ ಸಮಯದಲ್ಲಿ ಮನೆಯನ್ನು ಒರೆಸಬೇಡಿ, ಏಕೆಂದರೆ ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುವುದಿಲ್ಲ.

ನೆಲವನ್ನು ಸ್ವಚ್ಛಗೊಳಿಸಿದ ಬಳಿಕ ಬಕೆಟ್‌ನಲ್ಲಿರುವ ನೀರನ್ನು ಮನೆಯ ಹೊಸ್ತಿಲಲ್ಲಿ ಅಥವಾ ಮನೆಯ ಮುಖ್ಯ ಗೇಟ್‌ ಬಳಿ ಚೆಲ್ಲಬೇಡಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿಯನ್ನು ಮನೆಯ ಹೊಸ್ತಿಲಲ್ಲಿ ಇಟ್ಟಂತಾಗುತ್ತದೆ. ಮನೆಯ ಮುಖ್ಯದ್ವಾರ ಲಕ್ಷ್ಮಿ ದೇವಿಗೆ ಸೇರಿದ್ದು. ಹಾಗಾಗಿ ಅಲ್ಲಿ ಕೊಳಕು ನೀರನ್ನು ಹಾಕಬಾರದು.

ಯಾರಾದರೂ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ತಕ್ಷಣ ಕಸ ಗುಡಿಸಿ ನೆಲ ಒರೆಸಲು ಆರಂಭಿಸಬೇಡಿ. ಹೀಗೆ ಮಾಡುವುದರಿಂದ ಆ ವ್ಯಕ್ತಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳಾಗಬಹುದು.

ಮನೆ ಒರೆಸುವ ಮಾಪ್ ಬಕೆಟ್‌ ಕೆಂಪು ಬಣ್ಣದ್ದಾಗಿರಬಾರದು. ಅಷ್ಟೇ ಅಲ್ಲ ಒಡೆದ ಮಾಪ್ ಬಕೆಟ್ ಬಳಸಬೇಡಿ. ನೆಲ ಒರೆಸಿದ ನಂತರ  ಮಾಪ್ ಅನ್ನು ತೊಳೆಯಿರಿ ಮತ್ತು ಸರಿಯಾದ ಸ್ಥಳದಲ್ಲಿ ಇರಿಸಿ. ನೇತುಹಾಕಿದ್ದರೆ ಒಣಗಿದ ನಂತರ ಅದನ್ನು ತೆಗೆದುಹಾಕಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read